Mysore
26
scattered clouds

Social Media

ಬುಧವಾರ, 15 ಜನವರಿ 2025
Light
Dark

ಅವ್ವನ ಮಡಿಲಲ್ಲಿ ಅರಸು

ಅವ್ವನ ಮಡಿಲಲ್ಲಿ ಅರಸು

‘ನನ್ನ ಬದುಕಿನ ವಿಶೇಷ ಪಂಕ್ತಿಯಲ್ಲಿ ನಿಲ್ಲುವ ವಿಷಯ ಅಂದ್ರೆ ಅವ್ವ. ನಾನು ಊರಿಗೋದ್ರೂ, ಅವ್ವ ಬೆಂಗಳೂರಿಗೆ ಬಂದ್ರೂ ಅವಳ ಕೈ ತುತ್ತೇ ತಿನ್ನೋದು’ ಎಂದು ಸೋಷಲ್ ಮೀಡಿಯಾದಲ್ಲಿ ಬರೆದುಕೊಂಡು ಅವ್ವ ಕೈತುತ್ತು ತಿನ್ನಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ ಮಂಡ್ಯ ಮೂಲದ ನಿರ್ದೇಶಕ, ಚಿತ್ರ ಸಾಹಿತಿ ಅರಸು ಅಂತಾರೆ.

ತಾಯಿಯ ಮೇಲಿನ ಪ್ರೀತಿಯನ್ನು ಅತ್ಯಾಪ್ತವಾಗಿ ದಾಖಲಿಸಿ ಒಂದು ಕವಿತೆಯನ್ನೂ ‘ಆಂದೋಲನ’ಕ್ಕೆ ಬರೆದಿದ್ದಾರೆ ಅರಸು ಅಂತಾರೆ.

ಲಾಲಿ ಲಾಲಿ ಲಾಲಿ ಲಾಲಿ
ಲೋಕ ಎಲ್ಲಾ ಈ ತಂಗಾಳಿ
ಗುಡಿಯಲ್ಲಿ ಇವಳಿಲ್ಲ
ಹುಡುಕುವ ಹಾಗಿಲ್ಲ
ನಡೆದಾಡೋ ದೈವ ಅವ್ವ ಅವ್ವ

ಹೊತ್ತುಟ್ಟೋ ಮುಂಚೆನೇ ಏಳೋದು ಇವಳೇನೇ
ಅರ್ಕ ನಿನಗಿಂತಾಲೂ ಮುಂದು ಅವ್ವ
ದಿಕ್ಕು ದಿಕ್ಕಾಪಾಲು ನೀನಿಲ್ಲದೆ
ಹುತ್ತು ಬಿತ್ತೋಳೆ ಜಗವನ್ನೇ

ನೀತಿಯ ಪದ ಹಾಡಿ ಮನಸಿಗೆ ಮುದ ನೀಡಿ
ಬದುಕನ್ನು ಹದ ಮಾಡೋ ವೇದ ಅವ್ವ
ಸೋತು ಗೆದ್ದ ಕರ್ಣ ನಿನ್ನಿಂದಲೇ
ಲೋಕದ ಓಂಕಾರ ತಾಯೇ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ