ಆಗಸ್ಟ್ ೧೩ರಂದು ಮೈಸೂರು ಮಹಾ ನಗರ ಪಾಲಿಕೆಯು ಜುಲೈ ನೀರಿನ ಬಳಕೆಯ ಬಿಲ್ ಬಂದಿದೆ (ಬಿಲ್ ಸಂ. ೪೧೦೪೧೧೯೧). ಈವರೆಗೂ ಆನ್‌ಲೈನ್ ಮೂಲಕ ಬಿಲ್ ಪಾವತಿ ಮಾಡುತ್ತಿದ್ದು, ಆನ್‌ಲೈನ್‌ನಲ್ಲಿ ಬಂದಿರುವ ಬಿಲ್ ನಂಬರ್ ೦೭೨೦೨೫೩೨೪೯೩ ಆಗಿದ್ದು, ಮೊತ್ತ ಒಂದೇ ಆಗಿರುತ್ತದೆ. ಈ ರೀತಿ ಒಂದೇ ತಿಂಗಳ ಬಿಲ್ಲಿಗೆ ಎರಡೆರಡು ಸಂಖ್ಯೆ ಹೇಗೆ ? ಇದರಿಂದ ಸಮಸ್ಯೆ ಇಲ್ಲವೇ ? ಈ ನಿಟ್ಟಿನಲ್ಲಿ ಪಾಲಿಕೆ ಅಥವಾ ನೀರು ಸರಬರಾಜು ಮಂಡಳಿಯವರು ಸ್ಪಷ್ಟನೆ ನೀಡಬೇಕಾಗಿದೆ.
-ವಿಜಯ್ ಹೆಮ್ಮಿಗೆ , ಮೈಸೂರು



