ಮೈಸೂರು: ನಗರದ ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಆರ್‌ಟಿಒ ಫೀಡರ್ ಹಾಗೂ ಕಲಾಮಂದಿರದ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಕೋರ್ಟ್ ಫೀಡರ್‌ನಲ್ಲಿ ಸೆ.4ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಆರ್‌ಟಿಒ ಫೀಡರ್ ವ್ಯಾಪ್ತಿಯಲ್ಲಿನ ಪ್ರದೇಶಗಳು: ಬಲ್ಲಾಳ್ ವೃತ್ತ, ಚಾಮರಾಜ ಪುರಂ, ಆರ್ ಟಿಒ ಕಚೇರಿ ಸುತ್ತಮುತ್ತ ಚಾಮರಾಜ ಮೊಹಲ್ಲಾ, ಜೈನ್ ಭವನ್, ಬೆಸ್ತರಗೇರಿ, ವಿಷ್ಣುವರ್ಧನ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಕೋರ್ಟ್ ಫೀಡರ್ ವ್ಯಾಪ್ತಿಯಲ್ಲಿನ ಪ್ರದೇಶಗಳು: ಸೀತಾರಸ್ತೆ, ಮಹಾರಾಜ ಹಾಸ್ಟೆಲ್, ರಾಮಸ್ವಾಮಿ ವೃತ್ತ, ಜಿಪಂ ಕಚೇರಿ, ಕೋರ್ಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಎನ್.ಆರ್.ಮೊಹಲ್ಲಾದ ಸೆಸ್ಟ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಿಳಿಸಿದ್ದಾರೆ.