Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಸಮಸ್ಯೆಗಳು ತರಹೇವಾರಿ; ಎಸ್‌ಪಿ ಮಾಡುವರೆ ರಿಪೇರಿ?

‘ಆಂದೋಲನ’ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರುಗಳ ಮಳೆ

ಮೈಸೂರು: ‘ಆಂದೋಲನ’ ದಿನಪತ್ರಿಕೆ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕರೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಅವರ ಬಳಿ ಹೇಳಿಕೊಂಡ ಸಮಸ್ಯೆಗಳ ಬಗೆಗಿನ ವಿವರ ಇಲ್ಲಿದೆ.

 

ಚಿರಂಜೀವಿ ಸಿ. ಹುಲ್ಲಹಳ್ಳಿ

ಹುಲ್ಲಹಳ್ಳಿ ಜಗದೀಶ್: ಹುಲ್ಲಹಳ್ಳಿ ಮಾಂಸಾಹಾರದ ಹೋಟೆಲ್‌ವೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಪೊಲೀಸರೊಬ್ಬರು ಇದರಲ್ಲಿ ಶಾಮೀಲಾ ಗಿರುವ ಶಂಕೆ ಇದೆ. ಪೇದೆ ಕುಡಿದ ಮತ್ತಿನಲ್ಲಿ ಕೆಲಸ ಮಾಡುತ್ತಾರೆ. ಸಾರ್ವಜನಿಕ ರೊಂದಿಗೆ ದುವರ್ತನೆ ತೋರುತ್ತಿದ್ದು, ಶಿಸ್ತು ಕ್ರಮ ಜರುಗಿಸಿ.

ಎಸ್‌ಪಿ:ಕುಡಿದು ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ವಿರುದ್ಧ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು. ಜೊತೆಗೆ ಸಾರ್ವಜನಿಕ ರೊಂದಿಗೆ ಸರಿಯಾಗಿ ವರ್ತಿಸಲು ಸೂಚನೆ ನೀಡುವೆ.

ಕೃಷ್ಣ (ಸರಗೂರು): ಸರಗೂರು ಠಾಣೆಯಲ್ಲಿ ಇರುವ ಸಿಬ್ಬಂದಿಗಳ ಕೊರತೆ ನೀಗಿಸಿ.

ಎಸ್‌ಪಿ: ಜಿಲ್ಲೆಯಲ್ಲಿನ ಪೊಲೀಸ್ ಠಾಣೆಗಳಿಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಪೊಲೀಸ್ ಠಾಣೆ ಸಿಬ್ಬಂದಿ ಕೊರತೆಯನ್ನು ಸರಿದೂಗಿಸಲಾಗುವುದು. ಸರಗೂರು ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಸಾರ್ವಜನಿಕರು ಹೆಚ್ಚಿನ ಸಮಸ್ಯೆ ಇದ್ದರೆ ೧೧೨ಗೆ ಕರೆ ಮಾಡಬಹುದು.

ಪ್ರದೀಪ್ (ಎಚ್. ಡಿ. ಕೋಟೆ): ಕೊಲೆ ಯತ್ನದ ಆರೋಪಿ ಸಣ್ಣ ಕುಮಾರ ಜಾಮೀನು ರದ್ದು ಪಡಿಸಿ. ಇವರಿಗೆ ಕುಮ್ಮಕ್ಕು ನೀಡಿದ ಪೊಲೀಸ್ ಪೇದೆ ಮಹದೇವಸ್ವಾಮಿ ಮತ್ತು ಯೋಗೇಶ್ ವಿರುದ್ಧ ಕ್ರಮ ಕೈಗೊಳ್ಳಬೆಕು.

ಎಸ್‌ಪಿ: ಹಲ್ಲೆ ಆರೋಪದ ಪ್ರಕರಣವನ್ನು ಪರಿ ಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಪೊಲೀಸ್ ಪೇದೆಗಳ ವರ್ತನೆಯ ವಿರುದ್ಧ ಲಿಖಿತ ದೂರು ದಾಖಲಿಸಿದರೆ ಕಚೇರಿಯಲ್ಲಿ ಕೂಲಂಕಷವಾಗಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.

ಪುಟ್ಟರಾಜು (ವಕೀಲ ಹುಣಸೂರು): ಅಕ್ಟೋಬರ್‌ನಲ್ಲಿ ಗಿರಿಜನ ಆಶ್ರಮ ಶಾಲೆಯಲ್ಲಿ ನಡೆದಿರುವ ಪೋಕ್ಸೋ ಪ್ರಕರಣವನ್ನು ಮಕ್ಕಳಿಗೆ ಬೆದರಿಕೆ ಹಾಕಿ ಮುಚ್ಚಿ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳು ಅಳಲು ತೋಡಿಕೊಂಡಿರುವ ವಿಡಿಯೋ ನನ್ನ ಬಳಿ ಇವೆ. ಈಗ ಯಾವ ರೀತಿ ದೂರು ನೀಡಬೇಕು.

ಎಸ್‌ಪಿ: ಫೋಕ್ಸೋ ಪ್ರಕರಣ ಸಂಬಂಧ ತಡ ಮಾಡದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ದಾಖಲಿಸಿ. ಆ ನಂತರ ಇಲಾಖೆಯೊಂದಿಗೆ ಜಂಟಿ ಯಾಗಿ ಕಾರ್ಯಾಚರಣೆ ನಡೆಸಿ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ.

ಶಿವಕುಮಾರ್ (ಮಲೆಯೂರು): ತಿ. ನರಸೀಪುರ ತಾಲ್ಲೂಕಿನ ಮಲೆಯೂರಿನಲ್ಲಿ ಹೆಚ್ಚಿರುವ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿ

ಎಸ್‌ಪಿ: ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಯೊಂದಿಗೆ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಮದ್ಯ ಅಕ್ರಮ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.

ಉಷಾ ಪ್ರಕಾಶ್ (ಮೈಸೂರು): ವಿವೇಕಾನಂದ ವೃತ್ತದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ

ಎಸ್‌ಪಿ: ಈಗಾಗಲೇ ನಗರ ಮತ್ತು ಜಿಲ್ಲಾ ವ್ಯಾಪ್ತಿಯ ವೃತ್ತಗಳಲ್ಲಿ ಹಲವಾರು ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. ಇನ್ನೂ ಅವಶ್ಯವಿದ್ದರೆ ಜಿಲ್ಲಾದಿಕಾರಿಯವರೊಂದಿಗೆ ಚರ್ಚಿಸಿ ಹೆಚ್ಚಿನ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು.

ದೀಕ್ಷಿತ್ (ಅಂತರಸಂತೆ): ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಿ ಮತ್ತು ಎಚ್. ಡಿ. ಕೋಟೆ ಪೊಲೀಸ್ ಪೇದೆ ಕಿರಣ್ ಕುಮಾರ್‌ಗೆ ನಾಗರಿಕ ಸ್ನೇಹಿಯಾಗಿ ವರ್ತಿಸುವಂತೆ ಸೂಚನೆ ನೀಡಿ

ಎಸ್‌ಪಿ: ಜನ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸು ವಂತೆ ಎಲ್ಲ ಪೊಲೀಸರಿಗೂ ಸೂಚನೆ ನೀಡಲಾ ಗಿರುತ್ತದೆ. ದುವರ್ತನೆ ತೋರುವ ಪೊಲೀಸರ ವಿರುದ್ಧ ಲಿಖಿತ ದೂರು ನೀಡಬಹುದು. ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಸಿದ್ದರಾಜು (ಎಚ್. ಡಿ. ಕೋಟೆ): ಪೊಲೀಸ್ ಠಾಣೆ ಎದುರಿನ ಗುರುಭವನದ -ಂಡ್ಲಿ ಫಿಟ್ನೆಸ್ ಕೆಳಗಡೆ ಬೇಕರಿ ಬಳಿ ಕೆಲವರಿಂದ ನಡೆಯುತ್ತಿರುವ ಪುಡಾಂಟ ತಡೆಗೆ ಕ್ರಮ ಕೈಗೊಳ್ಳಬೇಕು.

ಎಸ್‌ಪಿ: ಶೀಘ್ರದಲ್ಲಿಯೇ ಪುಂಡಾಟ ನಿಯಂತ್ರಣಕ್ಕೆ ಬರಲಿದೆ. ನಾಳೆಯಿಂದ ಸಮಸ್ಯೆ ಇರುವುದಿಲ್ಲ.

ನಗರ್ಲೆ ವಿಜಯಕುಮಾರ್ (ಸಾಮಾಜಿಕ ಕಾರ್ಯಕರ್ತ): ನಗರ್ಲೆ ಒಳಗಡೆ ಬೀಟ್ ಪೊಲೀಸ್ ಬರುತ್ತಿಲ್ಲ. ಆರೋಪ ಮತ್ತು ಪ್ರತ್ಯಾರೋಪ ಎರಡು ಪ್ರಕರಣದಲ್ಲಿಯೂ ಚಾರ್ಜ್‌ಶೀಟ್ ಸಲ್ಲಿಸುತ್ತಿದ್ದು, ಇದರಿಂದ ಅನ್ಯಾಯ ಆದವರಿಗೆ ನ್ಯಾಯ ಸಿಗುತ್ತಿಲ್ಲ. ಇದರ ವಿರುದ್ಧ ಕ್ರಮ ಜರುಗಿಸಿ

ಎಸ್‌ಪಿ: ಪ್ರಕರಣದ ಕುರಿತು ಪರಿಶೀಲನೆ ನಡೆಸಲಾಗುವುದು. ನಿಷ್ಪಕ್ಷ ತನಿಖೆ ನಡೆಸಿ ಅನ್ಯಾ ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುತ್ತೇವೆ. ನಗರ್ಲೆ ಗ್ರಾಮಕ್ಕೆ ಬೀಟ್ ಪೊಲೀಸರು ಬರುವಂತೆ ಸೂಚಿಸುತ್ತೇನೆ.

ಚೆಲುವಸ್ವಾಮಿ (ಉಪ್ಪಿನಹಳ್ಳಿ): ರಾಷ್ಟ್ರೀಯ ಹೆದ್ದಾರಿ ೭೭೬ರ ಹೊಸಹಳ್ಳಿ ಬಳಿ ಸೇತುವೆ ನಿರ್ಮಾಣ ಕಾಮಗಾರಿಯಿಂದ ಅಪಘಾತ ವಾಗುವ ಸಂಭವ ಎದುರಾಗಿದ್ದು, ಸ್ಥಳದಲ್ಲಿ ಸಿಗ್ನಲ್ ಲೈಟ್ ಅಥವಾ ಬ್ಯಾರಿಕೇಡ್ ಅಳವಡಿಸಬೇಕು.

ಎಸ್‌ಪಿ: ಬ್ಯಾರಿಕೇಡ್‌ಗಳನ್ನು ಹಾಕಿಸಲಾಗುತ್ತಿದೆ. ಸಿಗ್ನಲ್ ಲೈಟ್ ಮತ್ತು ಹಂಪ್ಸ್ ಹಾಕಿಸುವ ಕುರಿತು ಪರಿಶೀಲನೆ ನಡೆಸಲಾಗುವುದು.

ಮೋಹನ್ ಕುಮಾರ್ (ಅಂತರಸಂತೆ): ಗ್ರಾಮದಲ್ಲಿ ಗೋ ಹತ್ಯೆ ಮತ್ತು ಮಾರಾಟ ನಿರಂತರವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಕ್ರಮ ಜರುಗಿಸಬೇಕು.

ಎಸ್‌ಪಿ: ಗೋ ಹತ್ಯೆ ಮತ್ತು ಮಾರಾಟ ಮಾಡುತ್ತಿರುವ ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸುತ್ತೇವೆ. ಆದರೆ, ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳಬಾರದು. ನೈತಿಕ ಪೊಲೀಸ್ ಗಿರಿ ಅಪರಾಧ. ನಮಗೆ ದೂರು ಕೊಡಿ ನಾವು ನಿಯಂತ್ರಣಕ್ಕೆ ತರುತ್ತೇವೆ.

ಮೈಸೂರು ಬಸವಣ್ಣ: ಕೇರ್ಗಳ್ಳಿಯಲ್ಲಿ ಪೊಲೀಸ್ ಬೂತ್ ಆರಂಭಿಸಿ

ಎಸ್‌ಪಿ: ಸ್ಥಳ ಪರಿಶೀಲನೆ ನಡೆಸಿ ಅವಶ್ಯ ಇದ್ದಲ್ಲಿ ಪೊಲೀಸ್ ಬೂತ್ ಅಳವಡಿಸುತ್ತೇವೆ.

 

ಸಂತೋಷ್ (ಕಮ್ಮಾರಹಳ್ಳಿ): ಇಲ್ಲೊಬ್ಬ ಜೈಲು ವಾಸ ಅನುಭವಿಸಿದರೂ ಅಕ್ರಮ ಮದ್ಯ ಮಾರಾಟ ನಿಲ್ಲಿಸಿಲ್ಲ.

ಎಸ್‌ಪಿ: ಅಬಕಾರಿ ಇಲಾಖೆಯವರೊಂದಿಗೆ ಮತ್ತೊಮ್ಮೆ ಜಂಟಿ ಕಾರ್ಯಾಚರಣೆ ನಡೆಸಿ ಆತನ ವಿರುದ್ಧ ಕ್ರಮ ಜರುಗಿಸಲಾಗುವುದು.

ಅಲ್ವಿನ್ ಡಿ’ಸೋಜಾ (ಮೈಸೂರು): ನನ್ನ ಮನೆಯಲ್ಲಿ ೬ ಮೇಕೆಗಳು ಕಳ್ಳತನವಾಗಿವೆ. ಆದರೆ, ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ.

ಎಸ್‌ಪಿ: ಈ ಬಗ್ಗೆ ಪರಿಶೀಲನೆ ನಡೆಸಿ ನಿಮ್ಮನ್ನು ನಮ್ಮ ಕಚೇರಿಗೆ ಕರೆಸಿ ಸಮಸ್ಯೆ ಬಗೆಹರಿಸುತ್ತೇವೆ.

ಮಹದೇವಶೆಟ್ಟಿ ಸೋಸಲೆ: ಶಾಲಾ-ಕಾಲೇಜು ಬಳಿ ಬೀಡಿ, ಸಿಗರೇಟು ಮಾರಾಟಕ್ಕೆ ಕಡಿವಾಣ ಹಾಕಿ

ಎಸ್‌ಪಿ: ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವನೆ ಮಾಡುವವರ ವಿರುದ್ಧ ಪ್ರಕ ರಣ ದಾಖಲಾಗುತ್ತಿವೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು.

ಮಾದು: ನಿರ್ವಾಹಕನ ಸುಳ್ಳು ಆರೋಪಕ್ಕೆ ನನಗೆ ಪೊಲೀಸರಿಬ್ಬರು ಕಪಾಳಕ್ಕೆ ಹೊಡೆದರು, ಈ ಬಗ್ಗೆ ಕ್ರಮವಹಿಸಿ

ಎಸ್‌ಪಿ: ಏಕಾಏಕೀ ಹಲ್ಲೆ ಮಾಡಿರುವ ಕುರಿತು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿ.

ವೆಂಕಟೇಶ್, ವಿಜಯನಗರ: ರಸ್ತೆಯಲ್ಲಿ ಧಾನ್ಯ ಒಕ್ಕಣೆಯನ್ನು ಪೊಲೀಸರು ತಡೆಯಬೇಕು.

ಎಸ್‌ಪಿ: ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ರೈತರಿಗೆ ತಿಳಿ ಹೇಳಲಾಗುತ್ತಿದೆ. ಮಾತು ಕೇಳದವರ ವಿರುದ್ಧ ಕ್ರಮ ಜರುಗಿಸುತ್ತೇವೆ.

 

ಕಾಳಿಹುಂಡಿ ಶಿವಕುಮಾರ್: ಮುಂಜಾನೆ ಕಳ್ಳತನಗಳು ಹೆಚ್ಚಾಗಿದ್ದು, ಗಸ್ತು ಹೆಚ್ಚಿಸಬೇಕು. ದಟ್ಟಗಳ್ಳಿಯಲ್ಲಿ ಪೊಲೀಸ್ ಠಾಣೆ ತೆರೆಯಿರಿ

ಎಸ್‌ಪಿ: ಜಿಲ್ಲೆಯಲ್ಲಿ ಗುಡ್ ಮಾರ್ನಿಂಗ್ ಬೀಟ್ ವ್ಯವಸ್ಥೆ ಜಾರಿಯಲ್ಲಿದೆ. ಬೆಳಿಗ್ಗೆ ೫ರಿಂದ ೯ರವರೆಗೆ ಪೊಲೀಸರು ಗಸ್ತಿನಲ್ಲಿರುತ್ತಾರೆ. ಸ್ಥಳೀಯವಾಗಿ ಸಮಸ್ಯೆ ಇದ್ದರೆ ೧೧೨ಕ್ಕೆ ಕರೆ ಮಾಡಿದರೆ ೧೫-೨೦ ನಿಮಿಷದೊಳಗೆ ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ಬರಲಿದ್ದೇವೆ. ದಟ್ಟಗಳ್ಳಿಯಲ್ಲಿ ಪೊಲೀಸ್ ಠಾಣೆ ಆರಂಭಿಸುವ ಕುರಿತು ನಗರ ಆಯುಕ್ತರ ಗಮನಕ್ಕೆ ತರುತ್ತೇವೆ.

ಭಾನು ಪ್ರಕಾಶ್ (ಮೈಸೂರು ಗ್ರಾಹಕರ ಪರಿಷತ್)

ಅಕ್ರಮ ಪಿಜಿಗಳಿಗೆ ಕಡಿವಾಣ ಹಾಕಿ. ಪಿಜಿಯಲ್ಲಿ ಉಳಿಯುವ ಸಾರ್ವಜನಿಕರಿಗೆ ನಿಯಮಗಳನ್ನು ರೂಪಿಸಿ

ಎಸ್‌ಪಿ: ನಗರ ಮತ್ತು ಜಿಲ್ಲೆಯಲ್ಲಿ ಹೆಚ್ಚುತ್ತಿ ರುವ ಪಿಜಿಗಳ ಪರಿಶೀಲನೆ ನಡೆಸಲಾಗುವುದು. ನಗರ ಪ್ರದೇಶದಲ್ಲಿ ಪಿಜಿಗಳಿಂದ ಆಗಿರುವ ತೊಂದರೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಗುವುದು.

 

 

Tags: