Mysore
24
overcast clouds

Social Media

ಗುರುವಾರ, 11 ಜೂನ್ 2026
Light
Dark

ರಾಷ್ಟ್ರೀಯ ಕೆಟಲ್‌ಬಾಲ್ ಟೂರ್ನಿಯಲ್ಲಿ ಮಿಂಚಿದ ಪ್ರತಿಭೆಗಳು

ಹೇಮಂತ್‌ಕುಮಾರ್

೧೦ ಚಿನ್ನ, ೬ ಬೆಳ್ಳಿ, ೩ ಕಂಚಿನ ಪದಕಗಳನ್ನು ಬಾಚಿದ ಆಕ್ಸ್‌ಫರ್ಡ್ ಅಕಾಡೆಮಿ

ಮಂಡ್ಯ: ಪರಿಶ್ರಮವಿದ್ದೆಡೆ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೀರಂಗಪಟ್ಟಣ ತಾಲ್ಲೂಕಿನ ಮೊಗರಹಳ್ಳಿ ಬಳಿಯಿರುವ ದಿ ಆಕ್ಸ್‌ಫರ್ಡ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಕೆಟಲ್‌ಬಾಲ್ ಅಕಾಡೆಮಿಯ ೮ನೇ ರಾಷ್ಟ್ರೀಯ ಕೆಟಲ್ ಬಾಲ್ ಟೂರ್ನಿಯಲ್ಲಿ ೧೦ ಚಿನ್ನ, ೬ ಬೆಳ್ಳಿ ಹಾಗೂ ೩ ಕಂಚಿನ ಪದಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.

ಮಹಾರಾಷ್ಟ್ರದ ಶಿರಡಿಯಲ್ಲಿ ಜೂ.೪ರಿಂದ ೩ ದಿನಗಳ ಕಾಲ ನಡೆದ ಕೆಟಲ್ ಬಾಲ್ ಟೂರ್ನಿಯಲ್ಲಿ ಆಕ್ಸ್‌ಫರ್ಡ್ ಅಕಾಡೆಮಿಯ ೮ ಕೆ.ಜಿ. ೬೩ ಕೆಜಿ ತೂಕದೊಳಗಿನ ವಿದ್ಯಾರ್ಥಿ ಎಚ್.ಮನೋಜ್ ಒನ್‌ಆರ್ಮ್ ಜೆರ್ಕ್ನಲ್ಲಿ ಪ್ರಥಮ ಸ್ಥಾನ, ಲಾಂಗ್ ಸೈಕಲ್ ಜರ್ಕ್ ನಲ್ಲಿ ಪ್ರಥಮ, ಡಿ.ಪಿ.ಸಮರ್ಥ್ ಒನ್ ಆರ್ಮ್ ಜರ್ಕ್‌ನಲ್ಲಿ ಪ್ರಥಮ, ಪಾರ್ಥ ಎಸ್.ಕುಮಾರ್ ಪ್ರಥಮ, ಎಸ್.ಪ್ರೀತಮ್ ತೃತೀಯ ಬಹುಮಾನ ಗಳಿಸಿದ್ದಾರೆ.

ವಿದ್ಯಾರ್ಥಿನಿಯರ ವಿಭಾಗದಲ್ಲಿ ಒನ್ ಆರ್ಮ್ ಜರ್ಕ್‌ನಲ್ಲಿ ಎಸ್.ಕಾನಿಷ್ಕ ಪ್ರಥಮ ಮತ್ತು ಲಾಂಗ್ ಆರ್ಮ್ ಜರ್ಕ್‌ನಲ್ಲಿ ದ್ವಿತೀಯ ಬಹುಮಾನ, ಲಾಂಗ್ ಸೈಕಲ್ ಜರ್ಕ್‌ನಲ್ಲಿ ಎಲ್.ನಿಹಾರಿಕ, ಪಿ.ಎಸ್. ನಿತ್ಯಲಕ್ಷಿ , ಎನ್.ಪೂರ್ವಿಕ ತೃತೀಯ ಬಹುಮಾನ ಗಳಿಸಿದ್ದಾರೆ.

ಇಂದು ಬಹುತೇಕ ಶಾಲೆಗಳಲ್ಲಿ ಪಠ್ಯಕ್ಕೆ ಕೊಡುತ್ತಿರುವಷ್ಟು ಮಹತ್ವವನ್ನು ಕ್ರೀಡೆಗೆ ನೀಡುತ್ತಿಲ್ಲ. ಮಕ್ಕಳು ಅಂಕ ಗಳಿಸುವ ಧಾವಂತದಲ್ಲಿ ದೈಹಿಕ ಕಸರತ್ತನ್ನು ಮರೆಮಾಚಿ ಬೌದ್ಧಿಕ ಕಸರತ್ತಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಕ್ರೀಡೆ, ಸಂಸ್ಕೃತಿ, ಜನಪದ ಮುಂತಾದ ವೇದಿಕೆಗಳಿಂದ ವಿಮುಖರಾಗುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಜಿಲ್ಲೆಯ ಗಡಿ ಭಾಗದಲ್ಲಿರುವ ಗ್ರಾಮ ಮೊಗರವಳ್ಳಿ ಬಳಿಯ ದಿ ಆಕ್ಸ್‌ಫರ್ಡ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಬಾಚಿಕೊಂಡು ಬಂದಿರುವುದು ಮಾದರಿಯಾಗಿದೆ. ಮಾತ್ರವಲ್ಲ, ಇನ್ನಷ್ಟು ಪ್ರೋತ್ಸಾಹ ಸಿಕ್ಕರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡುತ್ತೇವೆಂಬ ವಿಶ್ವಾಸ ಮೂಡಿಸಿದ್ದಾರೆ.

ಇವರ ಈ ಸಾಧನೆಗೆ ತರಬೇತಿಯ ಮೂಲಕ ಪ್ರೇರಣೆಯಾದ ಟ್ರೇನಿಗಳಾದ ವಿನಯ್ ಹಾಗೂ ಮನೋಹರ್ ಅವರ ನಿರಂತರ ಪರಿಶ್ರಮವನ್ನು ಮರೆಯುವಂತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

೬೩ ಕೆ.ಜಿ. ಒಳಗಿನ ವಿಭಾಗದಲ್ಲಿ ಎಚ್.ಮನೋಜ್ ಪ್ರಥಮ: 

ಪಾಂಡವಪುರ ತಾಲ್ಲೂಕಿನ ಮೇನಾಗರ ಗ್ರಾಮದ ಹೇಮಂತ್ ಕುಮಾರ್ ಮತ್ತು ಕಲಾವತಿ ಅವರ ಪುತ್ರ ಎಚ್.ಮನೋಜ್ ೬೩ ಕೆ.ಜಿ.ಒಳಗಿನ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿರುವುದು ಈತನ ನಿರಂತರ ಸಾಧನೆಗೆ ಸಾಕ್ಷಿಯಾಗಿದೆ. ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ, ವೇದಿಕೆ ಸಿಕ್ಕರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಗ್ರಾಮಸ್ಥರು ಅಭಿನಂದಿಸಿದ್ದಾರೆ.

” ಶಾಲೆ ಆರಂಭವಾಗಿ ೧೦ ವರ್ಷಗಳಾಗಿವೆ. ಪಠ್ಯದಷ್ಟೇ ಮಹತ್ವವನ್ನು ಕ್ರೀಡಾ ಕ್ಷೇತ್ರಕ್ಕೂ ನೀಡಲಾಗಿದೆ. ಹಾಗಾಗಿ ನಮ್ಮ ಅಕಾಡೆಮಿಯ ವಿದ್ಯಾರ್ಥಿಗಳು ತರಬೇತುದಾರರಾದನವೀನ್ ಹಾಗೂ ಮನೋಹರ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮುಂದೆಅಂತರರಾಷ್ಟ್ರೀಯಕ್ರೀಡಾಕೂಟಗಳಲ್ಲಿಯೂ ಸಾಧನೆ ಮಾಡುವ ಗುರಿ ಹೊಂದಲಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.”

-ಎಸ್.ನಾಗೇಶ್, ಸಂಸ್ಥಾಪಕ ಅಧ್ಯಕ್ಷರು, ಆಕ್ಸ್‌ಫರ್ಡ್ ಅಕಾಡೆಮಿ

” ಕಳೆದ ಎರಡು ತಿಂಗಳುಗಳಿಂದತರಬೇತಿಯನ್ನು ನೀಡಲಾಗುತ್ತಿತ್ತು, ವಿಶೇಷವಾಗಿ ವಿದ್ಯಾರ್ಥಿಗಳ ಪೋಷಕರು ಮತ್ತು ಶಾಲೆಯ ಆಡಳಿ ಮಂಡಳಿಯ ಪ್ರೋತ್ಸಾಹದಿಂದ ೧೦ ಚಿನ್ನ, ೬ ಬೆಳ್ಳಿ ಹಾಗೂ ೩ ಕಂಚಿನ ಪದಕಗಳಿಸಲು ಸಾಧ್ಯವಾಗಿದೆ. ಸಾಧನೆಗೆ ಪ್ರೇರಣೆ, ಸಹಕಾರ ಮುಖ್ಯ.”

-ಮನೋಹರ್, ಕ್ರೀಡಾ ತರಬೇತುದಾರರು

 

 

Tags:
error: Content is protected !!