ಆ.೨೫ರಂದು ‘ಆಂದೋಲನ’ ದಿನಪತ್ರಿಕೆಯಲ್ಲಿ ಮೈಸೂರು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟಾ ನ್ಲಿಯವರೊಡನೆ ನಡೆಸಿದ ಸಂದರ್ಶನ ಪ್ರಕಟವಾಗಿದ್ದು, ಸಂದರ್ಶನದಲ್ಲಿ ಮಾತನಾಡಿರುವ ಸ್ಟಾ ನ್ಲಿಯವರ ಆ ಮಾತುಗಳಲ್ಲಿ ಸ್ಪಷ್ಟವಾದ ನುಡಿ, ಎದೆಗಾರಿಕೆಯ ಮಾತು, ಪ್ರಾಮಾಣಿಕತೆಯ ದಿಟ್ಟತನ, ಜಾತ್ಯತೀತತೆಯ ನಿಲುವು, ಸಾಮಾಜಿಕ ಕಳಕಳಿ ಗೋಚರಿಸುತ್ತಿವೆ. ೨೫ ವರ್ಷಗಳ ಗೆಳೆತನದಲ್ಲಿ ನಾನು ಕಂಡಂತೆ ಸ್ಟ್ಯಾನ್ಲಿ ಯಾವ ಧರ್ಮಕ್ಕೂ ಅಂಟಿಕೊಂಡ ವ್ಯಕ್ತಿಯಲ್ಲ. ತನ್ನ ಹುಟ್ಟು ಕ್ರೆ ಸ್ತ ಧರ್ಮವಾದರೂ ನಮಗೆ ಸ್ಟ್ಯಾನ್ಲಿ ಎಂದೂ ಕ್ರಿಶ್ಚಿಯನ್ ಆಗಿ ಕಂಡೇ ಇಲ್ಲ. ಅಪ್ಪಟ ಭಾರತೀಯ ಎಂಬುದು ಅವರ ವ್ಯಕ್ತಿತ್ವದಲ್ಲಿ ಮತ್ತು ಹೋರಾಟದ ಬದುಕಿನಲ್ಲಿ ಎದ್ದು ಕಾಣುತ್ತದೆ. ಅನ್ಯಾಯವಾಗಿದೆ ಎಂದು ಕಂಡುಬಂದರೆ ಅವರು ಯಾವುದೇ ಪ್ರಭಾವಿ ರಾಜಕಾರಣಿಯಾಗಿರಲಿ, ಯಾವುದೇ ಧರ್ಮದ ಗುರುಗಳಾಗಿರಲಿ ಅದ್ಯಾವುದನ್ನೂ ಲೆಕ್ಕಿಸದೇ ನ್ಯಾಯಕ್ಕಾಗಿ ಹೋರಾಡುವ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು.
ಕೆಲವು ಮತಾಂಧರು ಸ್ಟಾ ನ್ಲಿಯವರನ್ನು ಕ್ರೆ ಸ್ತ ಧರ್ಮದಿಂದ ಗುರುತಿಸಿ ಅವಹೇಳನವಾಗಿ ಮಾತನಾಡುವುದು ಸರಿಯಲ್ಲ. ‘ನಿಂದಿಸುವವರೇ ನಮ್ಮ ಬಂಧುಕುಲ, ಆ ಹಂದಿಗಳೊಡನೆ ನಮಗೇನು ಛಲ’ ಎಂದು ತಮ್ಮ ಹೋರಾಟದ ಪ್ರಾಮಾಣಿಕ ಬದುಕಿನ ಬಂಡಿಯು ಎಲ್ಲಿಯೂ ನಿಲ್ಲದಂತೆ ಮುನ್ನಡೆಯುತ್ತಾ ನೊಂದ ಜೀವಗಳಿಗೆ ನ್ಯಾಯದೊರಕಿಸಲು ಪ್ರಯತ್ನಿಸುತ್ತಾ ಅವರು ಬದುಕು ಕಟ್ಟಿಕೊಡಲು ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿರುವ ಜೋಡಿ ‘ಸ್ಟಾ ನ್ಲಿ ಪರಶು’ ಈ ಇಬ್ಬರೂ ಗೆಳೆಯರ ಸಾಮಾಜಿಕ ಕಳಕಳಿಗೆ ಈ ಸಮಾಜ ಎಂದಿಗೂ ಋಣಿಯಾಗಿರಬೇಕು.
– ಈ.ಧನಂಜಯ ಎಲಿಯೂರು, ಮೈಸೂರು



