Mysore
22
overcast clouds

Social Media

ಸೋಮವಾರ, 08 ಜೂನ್ 2026
Light
Dark

ಕೋಟೆಗೆ 15ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದ ಸಿದ್ದರಾಮಯ್ಯ  

ಮಂಜು ಕೋಟೆ

ಮುಖ್ಯಮಂತ್ರಿಯಾಗಿದ್ದ ೮ ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ಮಂಜೂರು

ಎಚ್.ಡಿ.ಕೋಟೆ: ರಾಜ್ಯದ ಮತ್ತು ಜಿಲ್ಲೆಯ ಗಡಿ ಭಾಗವಾದ ಎಚ್.ಡಿ.ಕೋಟೆ ತಾಲ್ಲೂಕಿಗೆ ಮುಖ್ಯಮಂತ್ರಿಯಾಗಿದ್ದ ತಮ್ಮ ಎಂಟು ವರ್ಷಗಳ ಅಧಿಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ೧೫ಕ್ಕೂ ಹೆಚ್ಚು ಬಾರಿ ಭೇಟಿ ನೀಡಿ ವಾಸ್ತವ್ಯ ಹೂಡಿ, ೩ ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಮತ್ತು ಯೋಜನೆಗಳನ್ನು ನೀಡಿ ಕೋಟೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ

೪ ಜಲಾಶಯಗಳು, ೨ ಅಭಯಾರಣ್ಯ ಪ್ರದೇಶಗಳು, ಸುಂದರ ಪರಿಸರ, ವನ್ಯಜೀವಿ ಸಂಪತ್ತು ಹೊಂದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಮುಖ್ಯಮಂತ್ರಿಗಳು, ಶಾಸಕರು, ಸಚಿವರು ಶ್ರಮಿಸಿದ್ದರೂ ಇಲ್ಲಿ ಹೆಚ್ಚಾಗಿ ಗಿರಿಜನರು, ರೈತರು, ದಲಿತರು, ಜನಸಾಮಾನ್ಯರನ್ನು ಒಳಗೊಂಡಿರುವ ಕ್ಷೇತ್ರದ ಅಭಿವೃದ್ಧಿ ಮಾತ್ರ ಕುಂಟುತ್ತಾ ಸಾಗುತ್ತಿದೆ. ಕ್ಷೇತ್ರದಲ್ಲಿ ೨೦೧೩ರಲ್ಲಿ ಜಾ.ದಳ ಶಾಸಕರಾಗಿದ್ದ ಚಿಕ್ಕಮಾದು ಮತ್ತು ಲೋಕಸಭಾ ಸದಸ್ಯರಾಗಿದ್ದ ಕಾಂಗ್ರೆಸ್ ಪಕ್ಷದ ಆರ್.ಧ್ರುವನಾರಾಯಣ ಅವರ ಕ್ರಿಯಾಶೀಲತೆ, ಕ್ಷೇತ್ರದ ಕುರಿತ ಕಾಳಜಿಯಿಂದಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಜಿಲ್ಲೆಯವರಾದ ಸಿದ್ದರಾಮಯ್ಯ ಅವರನ್ನು ೪ ಬಾರಿ ತಾಲ್ಲೂಕಿಗೆ ಕರೆಸಿ ಹೊಸ ಸರಗೂರು ತಾಲ್ಲೂಕು ಘೋಷಣೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಏಕಲವ್ಯ ಶಾಲೆ, ಮೊರಾರ್ಜಿ ಶಾಲೆಗಳ ಸ್ಥಾಪನೆ, ಎಸ್‌ಸಿ, ಎಸ್‌ಟಿ ಸಮುದಾಯದವರ ಗ್ರಾಮಗಳ ಸಿಸಿ ರಸ್ತೆ ಅಭಿವೃದ್ಧಿ, ಆದಿವಾಸಿಗಳಿಗೆ ಮನೆ ನೀಡಿಕೆ, ಪ್ರಮುಖ ರಸ್ತೆಗಳ ಅಭಿವೃದ್ಧಿ ಮುಂತಾದ ಅನೇಕ ಯೋಜನೆಗಳಿಗೆ ಒಂದು ಸಾವಿರ ಕೋಟಿ ರೂ.ಗಳನ್ನು ಕೊಡಿಸಿದ್ದರು.

೨೦೧೮ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯರವರು ಆರು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಹೈಟೆಕ್ ಕನಕ ಭವನ, ಶಿರಮಳ್ಳಿ, ಮೊಳೆಯೂರು, ಶಿಂಡೇನಹಳ್ಳಿ ಗ್ರಾಮಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅನೇಕ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಲು ವಿರೋಧ ಪಕ್ಷದ ನಾಯಕರಾಗಿ ಅಂದು ಶಾಸಕರಾಗಿದ್ದ ಅನಿಲ್ ಚಿಕ್ಕಮಾದುಗೆ ಬೆಂಬಲವಾಗಿ ನಿಂತಿದ್ದರು.

೨೦೨೩ರಲ್ಲಿ ಶಾಸಕರಾಗಿ ಅನಿಲ್ ಚಿಕ್ಕಮಾದು ಪುನರಾಯ್ಕೆಯಾಗಿ, ರಾಜ್ಯದಲ್ಲಿ ಮತ್ತೆ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗಿಂತ ಹೆಚ್ಚಾಗಿ ಕೋಟೆ ತಾಲ್ಲೂಕಿಗೆ ಭೇಟಿ ನೀಡಿದ್ದ ಅವರು, ಶಾಸಕ ಅನಿಲ್ ಚಿಕ್ಕಮಾದು ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ಕಬಿನಿಗೆ ಬಾಗಿನ ಅರ್ಪಣೆ, ಗಿರಿಜನ ಹಾಡಿಗಳಿಗೆ ಭೇಟಿ, ಸಂವಾದ, ಶಿರಮಳ್ಳಿ ಗ್ರಾಮದಲ್ಲಿ ದೇವ ಸ್ಥಾನದ ಉದ್ಘಾಟನೆ, ರೆಸಾರ್ಟ್‌ನಲ್ಲಿ ವಾಸ್ತವ್ಯ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜತೆಗೆ ಎರಡೂವರೆ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಕುಡಿಯುವ ನೀರು, ರಸ್ತೆ, ಗಿರಿಜನರಿಗೆ ವಿದ್ಯುತ್, ಮನೆಗಳು, ಆದಿವಾಸಿಗಳ ನಿಗಮ ಸ್ಥಾಪನೆ, ಮೈಸೂರು-ಮಾನಂದವಾಡಿ ಮುಖ್ಯ ರಸ್ತೆ ಅಭಿವೃದ್ಧಿ, ಸರಗೂರಿನ ಆಡಳಿತಸೌಧ, ಆಸ್ಪತ್ರೆ, ಕಾಲೇಜು ಸ್ಥಾಪನೆ ಮುಂತಾದವುಗಳಿಗೆ ನೀಡುವ ಮೂಲಕ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.

” ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ವಿರೋಧ ಪಕ್ಷ ನಾಯಕರಾಗಿ ಕೆಲಸ ನಿರ್ವಹಿಸಿದ್ದಾಗ ನಮ್ಮ ತಂದೆ ಮತ್ತು ನನ್ನ ಅವಧಿಯಲ್ಲಿ ಎಚ್.ಡಿ.ಕೋಟೆ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಅನುದಾನ, ಸವಲತ್ತುಗಳನ್ನು ನೀಡಿದ್ದಾರೆ. ಇದರಿಂದಾಗಿ ಹಿಂದುಳಿದ ತಾಲ್ಲೂಕು ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗಿದೆ. ತಾಲ್ಲೂಕಿನ ಬಗ್ಗೆ ಮತ್ತು ನನ್ನ ಬಗ್ಗೆ ಸಿದ್ದರಾಮಯ್ಯ ಅವರು ಇಟ್ಟಿರುವ ಕಾಳಜಿಗೆ ನಾವೆಂದೂ ಚರಋಣಿಯಾಗಿದ್ದೇವೆ.”

-ಅನಿಲ್ ಚಿಕ್ಕಮಾದು, ಶಾಸಕರು

 

 

Tags:
error: Content is protected !!