ಇ -ಸಿಮ್ ತಂತ್ರeನದ ದುರ್ಬಳಕೆಯಿಂದ ಎಟಿಎಂ ಹಾಗೂ ಯುಪಿಐ ನಿಷ್ಕ್ರಿಯಗೊಂಡಿದ್ದರೂ ರೂ. ೪ ಲಕ್ಷದವರೆಗೆ ಸೈಬರ್ ವಂಚನೆ ನಡೆಯು ತ್ತಿರುವುದು ಡಿಜಿಟಲ್ ಭದ್ರತೆಯ ಸವಾಲಾಗಿದೆ. ಅಂಕಿ-ಅಂಶಗಳ ಪ್ರಕಾರ, ಪ್ರತಿದಿನ ಎಐ ಮೂಲಕ ೨,೦೦೦ ವಂಚಕ ಸಂಖ್ಯೆಗಳನ್ನು ಗುರುತಿಸಿ ನಿರ್ಬಂಧಿಸಲಾಗುತ್ತಿದೆ ಹಾಗೂ ದೂರಸಂಪರ್ಕ ಇಲಾಖೆ ಈಗಾಗಲೇ ೩ ರಿಂದ ೪ ಲಕ್ಷ ಅಕ್ರಮ ಸಿಮ್ಗಳನ್ನು ನಿಷ್ಕ್ರಿಯಗೊಳಿಸಿದೆ.
ಅಪರಿಚಿತ ಲಿಂಕ್ಗಳ ಮೂಲಕ ಮೊಬೈಲ್ ಸಿಗ್ನಲ್ ಕಡಿತಗೊಳಿಸಿ, ತಮ್ಮ ಸಾಧನದಲ್ಲಿ ಇ-ಸಿಮ್ ಕ್ರಿಯಗೊಳಿಸಿಕೊಂಡು ಬ್ಯಾಂಕಿಂಗ್ ಒಟಿಪಿ ಪಡೆಯುವುದು ಈ ಕ್ರಿಮಿನಲ್ಗಳ ಮುಖ್ಯ ತಂತ್ರ. ಈ ಗಂಭೀರ ದೋಚುವಿಕೆಯನ್ನು ತಡೆಯಲು ಸರ್ಕಾರವು ತಕ್ಷಣವೇ ಜಗೃತಿ ಆಂದೋಲನವನ್ನು ಹಮ್ಮಿಕೊಳ್ಳಬೇಕು. ಸಾರ್ವಜನಿಕರು ಅಪರಿಚಿತ ಕರೆ ಹಾಗೂ ಲಿಂಕ್ಗಳಿಂದ ದೂರವಿರಬೇಕು. ಸಿಗ್ನಲ್ ಕಣ್ಮರೆಯಾದ ತಕ್ಷಣವೇ ಬ್ಯಾಂಕ್ ಮತ್ತು ಟೆಲಿಕಾಂ ಆಪರೇಟರ್ಗೆ ದೂರು ನೀಡುವುದು ಕಡ್ಡಾಯ. ಇ ಸಿಮ್ ನೀಡಿಕೆಗೆ ಬಯೋಮೆಟ್ರಿಕ್ ಪರಿಶೀಲನೆಯನ್ನು ಸರ್ಕಾರ ಕಟ್ಟುನಿಟ್ಟಾಗಿ ಜರಿಗೊಳಿಸಬೇಕು.
ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು


