ಜಾಗ ದೊರೆತರು ಸ್ಥಳೀಯರಿಂದ ವಿರೋಧ; ವೈಜ್ಞಾನಿಕ ಪರಿಸರ ಸ್ನೇಹಿ ಘಟಕ ಸ್ಥಾಪನೆಗೆ ಒಲವು
ಕೃಷ ಸಿದ್ದಾಪುರ
ಸಿದ್ದಾಪುರ: ಇಲ್ಲಿನ ಮೂರು ದಶಕಗಳ ಕಸ ಸಮಸ್ಯೆ ಪರಿಹಾರಕ್ಕೆ ಮತ್ತೊಂದು ಸಮಸ್ಯೆ ಎದು ರಾಗಿದ್ದು, ಕಸ ವಿಲೇವಾರಿಗೆ ಜಾಗ ಗುರುತು ಮಾಡಿ ಘಟಕ ಸ್ಥಾಪನೆಗೆ ಮುಂದಾಗುತ್ತಿದ್ದಂತೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಸಿದ್ದಾಪುರ ವ್ಯಾಪ್ತಿಯ ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾಳಿ ಎಂಬಲ್ಲಿ ಜಾಗವೊಂದನ್ನು ಗುರುತಿಸಲಾ ಗಿತ್ತು. ಕರಡಿಗೋಡುವಿನ ಖಾಸಗಿ ರೆಸಾರ್ಟ್ ವತಿಯಿಂದ ಒಂದು ಎಕರೆ ಜಾಗವನ್ನು ಸ್ಥಳೀಯರಿಂದ ಖರೀದಿಸಿ ವೈಜ್ಞಾನಿಕ ವಿಲೇವಾರಿ ಘಟಕವನ್ನು ಪ್ರಾರಂಭಿಸಲು ಸಂಬಂಧಪಟ್ಟ ಕಡತ ಗಳನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿ ದ್ದರು. ತಹಸಿಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಅಽಕಾರಿಗಳು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯೋಜನೆಯನ್ನು ರೂಪಿಸಿದ್ದರು. ಆದರೆ, ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಈ ಹಿಂದೆ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ಘಟ್ಟತಳ ಬಳಿ ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ತ್ಯಾಜ್ಯ ವಿಲೇವಾರಿಗೆ ಜಾಗ ಗುರುತಿಸಲಾಗಿತ್ತು. ಸಮೀಪದಲ್ಲಿ ತೋಡು ನೀರು ಹರಿಯುತ್ತಿರುವುದರಿಂದ ಈ ಜಾಗ ಸೂಕ್ತವಲ್ಲ ಎಂದು ತಡೆಯಾಗಿತ್ತು. ಇದೀಗ ಖಾಸಗಿ ಸಂಸ್ಥೆಯೊಂದು ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾಳೆ, ಅಚ್ಚುತ ಪೈಸಾರಿ ವ್ಯಾಪ್ತಿಯಲ್ಲಿ ಖಾಸಗಿ ಭೂಮಿಯನ್ನು ಖರೀದಿ ಮಾಡಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಲು ಸಹಕಾರ ನೀಡಿದೆ. ಆದರೆ, ಇದರಿಂದ ಈ ವ್ಯಾಪ್ತಿಯ ಸುಮಾರು ೩೦ಕ್ಕೂ ಹೆಚ್ಚು ಕುಟುಂಬ ಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾ ಗುತ್ತದೆ ಎಂಬುದು ಸ್ಥಳೀಯರ ಆರೋಪ.
ಈ ಗ್ರಾಮಕ್ಕೆ ತೆರಳಲು ಕಿರಿದಾದ ರಸ್ತೆ ಇದ್ದು, ಎರಡೂ ಬದಿ ವಾಹನ ಸಂಚಾರಕ್ಕೂ ತೊಂದರೆ ಯಾಗಲಿದೆ. ಸಮೀಪದಲ್ಲೇ ತೋಡು ಹರಿ ಯುತ್ತಿದ್ದು, ಗುರುತಿಸಿದ ಜಾಗಕ್ಕೆ ತೆರಳಲು ರಸ್ತೆ ಕೂಡ ಇಲ್ಲ ಹಾಗೂ ತೋಡು ನೀರು ಕಲುಷಿತ ಗೊಂಡು ಲಕ್ಷ್ಮಣತೀರ್ಥ ನದಿ ತಲುಪುತ್ತದೆ. ಸಮೀಪದಲ್ಲಿ ಅರಣ್ಯ ಪ್ರದೇಶವು ಇದ್ದು, ದಿನನಿತ್ಯ ಕಾಡುಪ್ರಾಣಿಗಳು ತೋಡು ನೀರನ್ನೇ ಅವಲಂಬಿಸಿವೆ ಎಂದು ಸ್ಥಳೀಯರು ದೂರಿದ್ದಾರೆ. ತ್ಯಾಜ್ಯ ನೀರು ಕಲುಷಿತಗೊಂಡರೆ ಪ್ರಾಣಿ ಹಾಗೂ ಪಕ್ಷಿಗಳಿಗೂ ಸಂಚಕಾರ ಎದುರಾಗಲಿದೆ.
ತ್ಯಾಜ್ಯದಿಂದ ನೀರು ಕಲುಷಿತಗೊಂಡರೆ ಪಕ್ಕದ ರೈತರ ಕೆರೆಗಳಲ್ಲಿ ತುಂಬುವ ನೀರನ್ನು ಕುಡಿದರೆ ಜಾನುವಾರುಗಳಿಗೂ ತೊಂದರೆ ಆಗಲಿದೆ. ಮಳೆಗಾಲದ ಸಂದರ್ಭದಲ್ಲಿ ನೀರು ತುಂಬಿ ಸಮೀಪದ ಮನೆಗಳಿಗೂ ಹರಿಯುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಗೆ ತ್ಯಾಜ್ಯ ವಿಲೇವಾರಿ ಘಟಕ ಅವಶ್ಯವಿದ್ದು, ಜನವಸತಿ ಪ್ರದೇಶ ಅಲ್ಲದ ಸ್ಥಳಗಳನ್ನು ಹುಡುಕಿ ಸಮಸ್ಯೆ ಆಗದ ರೀತಿಯಲ್ಲಿ ಪರಿಹರಿಸಬೇಕು. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಆ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಜಾಗ ಗುರುತು ಮಾಡಲಿ ಎಂದು ಒತ್ತಾಯಿಸಿರುವ ಸ್ಥಳೀಯರು, ಈ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಮುಂದಾದಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಿದ್ದಾಪುರ, ಮಾಲ್ದಾರೆ, ಗ್ರಾ. ಪಂ. ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ನಿಗದಿಪಡಿಸಿರುವ ಸ್ಥಳದ ಪಕ್ಕದಲ್ಲಿ ೩೦ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಂಬಂಧಪಟ್ಟವರು ಈ ಜಾಗವನ್ನು ಕೈಬಿಟ್ಟು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿದೆ. -ಕುಂಞಣ್ಣ, ಮಾಲ್ದಾರೆ ಗ್ರಾ. ಪಂ. ಉಪಾಧ್ಯಕ್ಷ
ಈ ಗ್ರಾಮಕ್ಕೆ ತೆರಳಲು ಕಿರಿದಾದ ರಸ್ತೆ ಇದ್ದು, ಎರಡೂ ಬದಿಯಲ್ಲಿ ವಾಹನ ಸಂಚಾರಕ್ಕೂ ತೊಂದರೆ ಯಾಗಲಿದೆ. ತ್ಯಾಜ್ಯ ವಿಲೇವಾರಿಗೆ ಗುರುತಿ ಸಿದ ಸಮೀಪದಲ್ಲೇ ತೋಡು ಹರಿಯುತ್ತಿದ್ದು, ಜಾಗಕ್ಕೆ ತೆರಳಲು ಸೂಕ್ತ ರಸ್ತೆ ಕೂಡ ಇಲ್ಲ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಈ ಜಾಗ ಸೂಕ್ತವಲ್ಲ. ಜನ ವಸತಿ ಪ್ರದೇಶ ಅಲ್ಲದ ಸ್ಥಳ ಗಳನ್ನು ಹುಡುಕಿ ಸಮಸ್ಯೆ ಆಗದ ರೀತಿಯಲ್ಲಿ ಪರ್ಯಾಯ ಜಾಗವನ್ನು ಕಂಡುಕೊಳ್ಳಬೇಕು. ವಿರೋಧದ ನಡುವೆಯೂ ಘಟಕ ಸ್ಥಾಪನೆಗೆ ಮುಂದಾ ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. -ರಾಕೇಶ್, ಗ್ರಾಮಸ್ಥರು