ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್‌ಗಳ ದರವನ್ನು ಮೇ ೧ರಿಂದ ಒಂದೇ ಬಾರಿಗೆ ೯೯೧ರೂ.ಗಳಿಗೆ ಏರಿಕೆ ಮಾಡಿದ್ದು, ಇದರಿಂದಾಗಿ ಹೋಟೆಲ್‌ಗಳಲ್ಲಿ ಊಟ ಹಾಗೂ ತಿಂಡಿ, ಕಾಫಿ, ಟೀ ದರ ಏರಿಕೆಯಾಗಿ ಜನ ಸಾಮಾನ್ಯರ ಮೇಲೆ ಹೊರೆ ಬೀಳುತ್ತದೆ ಹಾಗೂ ಮದುವೆ ಮೊದಲಾದ ಸಮಾರಂಭಗಳಿಗೂ ವಾಣಿಜ್ಯ ಸಿಲಿಂಡರ್‌ಗಳನ್ನೇ ಬಳಸುವುದರಿಂದ ಸಮಾರಂಭಗಳನ್ನು ಆಯೋಜಿಸುವವರಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಈ ವರೆಗೂ ನೂರಿನ್ನೂರು ರೂ. ಹೆಚ್ಚಳ ಮಾಡುತ್ತಿದ್ದುದು ಸಹಜ ಆದರೆ ಏಕಾಏಕಿ ೯೯೧ರೂ. ಹೆಚ್ಚಳ ಮಾಡಿರುವುದರಿಂದ ಹೋಟೆಲ್ ಉದ್ಯಮದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಸಿಲಿಂಡರ್ ಅಭಾವದಿಂದ ತೀವ್ರ ಕಂಗಾಲಾಗಿ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದ ಹೋಟೆಲ್ ಮಾಲೀಕರು ಸಿಲಿಂಡರ್ ದರ ಏರಿಕೆ ಹೊರೆಯಿಂದಾಗಿ ಹೋಟೆಲ್‌ಗಳನ್ನು ಶಾಶ್ವತವಾಗಿ ಮುಚ್ಚುವುದು ಅನಿವಾರ್ಯವಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ದರ ಏರಿಕೆಯನ್ನು ಹಿಂಪಡೆಯುವ ಮೂಲಕ ಹೋಟೆಲ್ ಉದ್ಯಮದವರ ಹಿತ ಕಾಪಾಡುವುದು ಅಗತ್ಯ.
-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ.





