Mysore
24
few clouds

Social Media

ಮಂಗಳವಾರ, 08 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಹಳೆ ಪಿಂಚಣಿ ಮರುಜಾರಿಯಿಂದ ಖಜಾನೆಗೆ ಭಾರ ಆಗದೇ?

ಚುನಾವಣಾ ಲಾಭಕ್ಕಾಗಿ ಹಳೆ ಪಿಂಚಣಿ ಯೋಜನೆ ಮರುಜರಿಗೆ ಹೊರಟಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

೩.೫ ಲಕ್ಷ ಸರ್ಕಾರಿ ನೌಕರರ ಓಲೈಕೆಗೆ ಸರ್ಕಾರಕ್ಕೆ ವಾರ್ಷಿಕ ೪೦ ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದ್ದು, ೨೦೨೬-೨೭ರ ಆಯವ್ಯಯದಲ್ಲಿ ಬಡ್ಡಿ ಪಾವತಿಗೇ ೬೦,೦೦೦ ಕೋಟಿ ರೂ. ಹಾಗೂ ಪಿಂಚಣಿಗೆ ೪೨,೦೦೦ ಕೋಟಿ ರೂ. ಕಾಯ್ದಿರಿಸಬೇಕಾದ ಸ್ಥಿತಿ ಬಂದಿದೆ. ೧೬ನೇ ಹಣಕಾಸು ಆಯೋಗದ ಎಚ್ಚರಿಕೆಯನ್ನು ಗಾಳಿಗೆ ತೂರಿ ಒಟ್ಟು ವೆಚ್ಚವನ್ನು ೧.೮೫ ಲಕ್ಷ ಕೋಟಿ ರೂ.ಗಳಿಗೆ ಏರಿಸುವುದು ಜವಾಬ್ದಾರಿಯುತ ಆಡಳಿತದ ಲಕ್ಷಣವಲ್ಲ.

ಅಭಿವೃದ್ಧಿ ಕಾಮಗಾರಿಗಳಿಗೆ, ಮೂಲಸೌಕರ್ಯಕ್ಕೆ ಹಣವಿಲ್ಲದೆ ಜನ ಸಾಮಾನ್ಯರು ಅನುಭವಿಸುವ ಕಷ್ಟಕ್ಕೆ ಸರ್ಕಾರವೇ ನೇರ ಹೊಣೆ. ಕೇವಲ ಶೇ. ೫೦ರಷ್ಟು ಪಿಂಚಣಿ ಭರವಸೆಯ ರಾಜಕೀಯ ತಂತ್ರಕ್ಕಾಗಿ ಭವಿಷ್ಯದ ಪೀಳಿಗೆಯನ್ನು ಸಾಲದ ಸುಳಿಯಲ್ಲಿ ತಳ್ಳುತ್ತಿರುವುದು ಬೇಜವಾಬ್ದಾರಿತನ. ರಾಜಕೀಯ ಲಾಭಕ್ಕಿಂತ ರಾಜ್ಯದ ಆರ್ಥಿಕ ಸ್ಥಿರತೆ ಮುಖ್ಯವಲ್ಲವೇ?

– ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!