ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ ಬೆಳೆದು ವಿಷಜಂತುಗಳಿಗೆ ಆಶ್ರಯತಾಣವಾಗಿತ್ತು.
ಇದನ್ನು ಸ್ವಚ್ಛಗೊಳಿಸುವಂತೆ ಇಲ್ಲಿನ ನಿವಾಸಿಗಳುಪಾಲಿಕೆ ಅಧಿಕಾರಿಗಳಿಗೆ ಕೇವಲ ದೂರವಾಣಿ ಮೂಲಕ ಮನವಿ ಸಲ್ಲಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡ ಪಾಲಿಕೆ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸಿ, ಈ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊ ಳಿಸಿ ನಿವಾಸಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗೆ ನಗರದ ಬಹುತೇಕ ಮೊಹಲ್ಲಾಗಳ ಕನ್ಸರ್ವೆನ್ಸಿಗಳಲ್ಲಿ ಹುಲ್ಲು-ಗಿಡಗಳು ಬೆಳೆದು ಅಲ್ಲಿನ ನಿವಾಸಿಗಳಿಗೆ ಕಿರಿಕಿರಿ ಮೂಡಿಸಿವೆ. ಬೇರೆ ವಾರ್ಡ್ನಲ್ಲೂ ಸ್ವಚ್ಛತೆಗೆ ಆದ್ಯತೆ ಕೊಟ್ಟರೆ ಪರಿಸರ ಚೆನ್ನಾಗಿರುತ್ತದೆ. ಪಾಲಿಕೆಗೆ ಅನೇಕ ವರ್ಷಗಳಿಂದ ಚುನಾವಣೆ ನಡೆಯದೇ ಇದ್ದರೂ ನೆನೆಗುದಿಗೆ ಸಮಸ್ಯೆಗೆ ಸ್ಪಂದಿಸಿ, ಈ ಪ್ರದೇಶವನ್ನು ಸ್ವಚ್ಛಗೊಳಿಸಲು ಸಹಕರಿಸಿದ ನಗರಪಾಲಿಕೆ ಮಾಜಿ ಸದಸ್ಯೆ ಭಾಗ್ಯ ಮಹದೇಶ್ ಹಾಗೂ ಇತರೆ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಹೇಳಲೇಬೇಕಾಗಿದೆ.
-ಜಿ.ಪಿ.ಹರೀಶ್, ಮೈಸೂರು



