ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ, ಬೆಸಗರಹಳ್ಳಿ ಗ್ರಾಮದಲ್ಲಿನ ಬಸ್ ನಿಲ್ದಾಣದ ಹತ್ತಿರ ಇರುವ ಸಾರ್ವಜನಿಕ ಶೌಚಾಲಯಕ್ಕೆ ಕಳೆದ ಒಂದು ವರ್ಷದಿಂದ ಬೀಗ ಹಾಕಿರುವುದರಿಂದ ಪ್ರತಿನಿತ್ಯ ಕೆಲಸ ಕಾರ್ಯ ನಿಮಿತ್ತ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.
ಶೌಚಾಲಯದ ಸಮೀಪವೇ ಬಸ್ ನಿಲ್ದಾಣ, ಮಾರುಕಟ್ಟೆ ಇದ್ದು ಜನಜಂಗುಳಿಯ ಪ್ರದೇಶವಾಗಿದ್ದು, ಸ್ಥಳೀಯರು ಶೌಚಾಲಯಕ್ಕೆ ಹೋಗಲು ಬಯಲು ಪ್ರದೇಶವನ್ನು ಆಶ್ರಯಿಸಬೇಕಾಗಿದೆ. ಶೌಚಾಲಯಕ್ಕೆ ಹಾಕಿರುವ ಬೀಗವನ್ನು ತೆರೆಯುವಂತೆ ಹಲವಾರು ಬಾರಿ ಸಂಬಂಽಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಗ್ರಾಮ ಪಂಚಾಯಿತಿಯವರು ಶೌಚಾಲಯಕ್ಕೆ ಹಾಕಿರುವ ಬೀಗ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
– ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





