Mysore
27
overcast clouds

Social Media

ಮಂಗಳವಾರ, 23 ಜೂನ್ 2026
Light
Dark

ಓದುಗರ ಪತ್ರ: ಮರಗಳ ಗಣತಿ ಸ್ವಾಗತಾರ್ಹ

ಮೈಸೂರಿನಲ್ಲಿ ಭೇರುಂಡ ಫೌಂಡೇಷನ್ ಮುಖ್ಯಸ್ಥರಾದ ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ಅವರ ನೇತೃತ್ವದಲ್ಲಿ ‘ನಮ್ಮ ಮರಗಳ ಗಣತಿ’ ಯ ಹೆಸರಿನಲ್ಲಿ ನಡೆದ ಮರಗಳ ಗಣತಿಯಲ್ಲಿ ವಿವಿಧ ಪ್ರಭೇದದ ೧,೨೧,೭೮೯ ಮರಗಳನ್ನು ದಾಖಲಿಸಿರುವುದು ಶ್ಲಾಘನೀಯ. ಭೇರುಂಡ ಫೌಂಡೇಷನ್ ನ ೫೨೦ ಕ್ಕೂ ಹೆಚ್ಚು ಸ್ವಯಂ ಸೇವಕರು ಮೈಸೂರಿನ ೬೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಬರುವ ಮರಗಳ ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಹಸಿರು ಹೊದಿಕೆಪ್ರಮಾಣ, ಮರಗಳ ಸಂಖ್ಯೆ, ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವ ಪ್ರಮಾಣ, ದತ್ತಾಂಶ ಮತ್ತುವೈಜ್ಞಾನಿಕ ವರದಿಯನ್ನು ತಯಾರಿಸಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಅವರಿಗೆ ನೀಡಿರುವುದು ಸ್ವಾಗತಾರ್ಹ. ಈ ಸಮೀಕ್ಷೆ ವರದಿ ನಗರದಲ್ಲಿ ಮರಗಳ ರಕ್ಷಣೆಗೆ ಪೂರಕವಾದರೆ ಒಳಿತು.

– ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು

 

Tags:
error: Content is protected !!