Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ:  ಸಾರಿಗೆ ಇಲಾಖೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿ

ಓದುಗರ ಪತ್ರ

ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಬಸ್ ಅಪಘಾತಗಳು ಮತ್ತು ಬೆಂಕಿ ಅವಘಡಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಸಾರ್ವಜನಿಕ ಸಾರಿಗೆ ಸೇವೆಗಳು ಲಕ್ಷಾಂತರ ಜನರ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿವೆ.  ಆದರೆ ಸುರಕ್ಷತೆ ಕುರಿತಾಗಿ ಅಗತ್ಯ ಎಚ್ಚರಿಕೆ ಮತ್ತು ತಾಂತ್ರಿಕ ಸುಧಾರಣೆಗಳು ಇನ್ನೂ ಅಲ್ಪಮಟ್ಟದಲ್ಲೇ ಇವೆ. ನಮ್ಮ ರಾಜ್ಯದ ಬಸ್‌ಗಳಲ್ಲಿ ಅಗ್ನಿ ಶಾಮಕ (ಫೈರ್ ಎಕ್ಸ್ಟಿಂಗ್ವಿಷರ್) ಉಪಕರಣ ಅಳವಡಿಸಬೇಕು ಎಂಬ ನಿಯಮದ ಅನುಷ್ಠಾನವನ್ನು ಬಿಗಿಗೊಳಿಸುವ ಅವಶ್ಯಕತೆ ಇದೆ. ಅದೇ ರೀತಿ ಬಸ್ಗಳಲ್ಲಿ ತಾಪಮಾನ ನಿಯಂತ್ರಕ (ಟೆಂಪರೇಚರ್ ಸೆನ್ಸಾರ್) ಹಾಗೂ ಅಗ್ನಿ ಪತ್ತೆ ಯಂತ್ರ (ಫೈರ್ ಡಿಟೆಕ್ಟರ್) ಅಳವಡಿಸುವುದು ಕಡ್ಡಾಯವಾಗ ಬೇಕಿದೆ.

ಬಸ್‌ಗಳ ಮೇಲ್ಭಾಗದಲ್ಲಿ ಸ್ವಯಂಚಾಲಿತ ನೀರಿನ ಸಿಂಪಡಣೆ ವ್ಯವಸ್ಥೆ (ಆಟೋಮ್ಯಾಟಿಕ್ ವಾಟರ್ ಸ್ಪ್ರಿಂಕ್ಲರ್ ಸಿಸ್ಟಂ) ಅಳವಡಿಸುವುದು ಹಾಗೂ ಬಸ್ ಚಾಲಕರು ಮತ್ತು ನಿರ್ವಾಹಕರು ಪ್ರತಿ ಆರು ತಿಂಗಳಿಗೊಮ್ಮೆ ಸುರಕ್ಷತಾ ತರಬೇತಿ ಪಡೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ಹೇಗೆ ಪ್ರತಿಕ್ರಿಯಿ ಸಬೇಕು ಎಂಬ ಮಾಹಿತಿಯನ್ನು ಬಸ್‌ನ ಒಳಭಾಗದಲ್ಲೇ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಸಾರಿಗೆ ಇಲಾಖೆಯು ಈ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನ ಮಾಡಿದರೆ, ಸಾರ್ವಜನಿಕರು ಭಯರಹಿತವಾಗಿ, ಪ್ರಯಾಣಿಸಬಹುದು. ಸರ್ಕಾರ ತಕ್ಷಣ ಈ ಕ್ರಮಗಳನ್ನು ಕೈಗೊಂಡು ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲಿ.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!