೧೮ ವರ್ಷಗಳ ಬಳಿಕ ಆರ್ಸಿಬಿ ತಂಡ ಐಪಿಎಲ್ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಈ ಸಂಭ್ರಮ ಕೆಲವೇ ಗಂಟೆಗಳಲ್ಲಿ ಶೋಕವಾಗಿ ಮಾರ್ಪಟ್ಟಿದ್ದು ವಿಪರ್ಯಾಸ. ಮಂಗಳವಾರ ರಾತ್ರಿ ಆರ್ಸಿಬಿ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಿಸಿದರು.
ಬುಧವಾರ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ೧೧ ಜನರ ಪ್ರಾಣ ಹಾರಿ ಹೋಯಿತು. ಹಲವು ಜನರು ಗಾಯಗೊಂಡರು. ಈ ಅಭಿಮಾನವನ್ನು ಏನೆಂದು ಹೇಳಬೇಕು? ಈ ಅಭಿಮಾನಿಗಳ ಸಾವಿಗೆ ಯಾರನ್ನು ಹೊಣೆ ಮಾಡಬೇಕು? ಇದು ಆಯೋಜಕರ ವೈಫಲ್ಯವೇ? ಇಲ್ಲ ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಉಂಟಾದ ಘಟನೆಯೇ? ಎಲ್ಲ ಕ್ರೀಡೆ ಗಳ ಬಗ್ಗೆ ಅಭಿಮಾನವಿರಬೇಕು. ಆದರೆ ಅಂಧಾಭಿಮಾನಿಗಳಾದಾಗ ಇಂತಹ ಘಟನೆಗಳು ಸಂಭವಿಸುತ್ತವೆ. ಅಭಿಮಾನವಿರಲಿ, ಆದರೆ ಅಂಧಾಭಿಮಾನ ಬೇಡ.
ಪಿ.ಸಿ.ಕಂಗಾಣಿಸೋಮು, ಕ್ಯಾತಮಾರನಹಳ್ಳಿ, ಮೈಸೂರು





