Mysore
23
overcast clouds

Social Media

ಬುಧವಾರ, 27 ಮೇ 2026
Light
Dark

ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: ಡಿ.ಕೆ.ಸುರೇಶ್‌ ಪುನರುಚ್ಛಾರ

ಬೆಂಗಳೂರು: ನನಗೆ ಈಗಲೂ ಭರವಸೆಯಿದೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಲ್ಪ ನಿಧಾನವಾದರೂ ಪರವಾಗಿಲ್ಲ. ಸಿಎಂ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ನನಗೆ ಈಗಲೂ ಭರವಸೆ ಇದೆ ಎಂದು ಹೇಳಿದರು.

ಇನ್ನು ಕೆಲ ಶಾಸಕರಿಂದ ವಿದೇಶಿ ಪ್ರವಾಸ ಕುರಿತು ಮಾತನಾಡಿದ ಅವರು, ಡಿಕೆಶಿ ವಿದೇಶಿ ಪ್ರವಾಸ ಆಯೋಜನೆ ಮಾಡಿದ್ದಲ್ಲ. ವಿದೇಶ ಪ್ರವಾಸಕ್ಕೂ ಡಿ.ಕೆ.ಶಿವಕುಮಾರ್‌ಗೂ ಯಾವುದೇ ಸಂಬಂಧವಿಲ್ಲ. ಅದನ್ನು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೇ. ಈ ಬಗ್ಗೆ ವಿದೇಶ ಪ್ರವಾಸದ ಆಯೋಜಕರನ್ನೇ ಕೇಳಿ. ಯಾರು ವಿದೇಶ ಪ್ರವಾಸ ಹೋಗುತ್ತಿದ್ದಾರೆ ಅವರನ್ನೇ ಕೇಳಿ ಎಂದು ಹೇಳಿದರು.

Tags:
error: Content is protected !!