ರಾಜ್ಯದ ವಿಧಾನ ಪರಿಷತ್ತಿನ ತಲಾ ಎರಡು ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಎನ್ಡಿಎ ಅಭ್ಯರ್ಥಿಗಳು ಗೆಲವು ಸಾಧಿಸಿರುವುದು ಗಮನಾರ್ಹವಾಗಿದೆ.
ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರೆ, ಒಂದು ಕ್ಷೇತ್ರದಲ್ಲಿ ಜಾ.ದಳ ಅಭ್ಯರ್ಥಿ ಗೆದ್ದಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿದೆ.
ಈ ಫಲಿತಾಂಶದಿಂದ ಬೀಗುತ್ತಿರುವ ಕೆಲವು ಬಿಜೆಪಿ ಹಾಗೂ ಜಾ.ದಳ ನಾಯಕರು ಇದು ಮುಂಬರುವ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಹೇಳಿದ್ದಾರೆ. ಆದರೆ ಖಂಡಿತ ಇದು ಸರಿಯಲ್ಲ. ವಿಧಾನ ಸಭೆ ಚುನಾವಣೆಯ ವಿಷಯಗಳೇ ಬೇರೆ, ವಿಧಾನ ಪರಿಷತ್ತಿನ ಚುನಾವಣೆಯ ವಿಷಯಗಳೇ ಬೇರೆ. ಹೀಗಾಗಿ ಇದಕ್ಕೂ, ೨೦೨೮ ರ ವಿಧಾನಸಭಾ ಚುನಾವಣೆಗೂ ತಾಳೆ ಹಾಕುವುದು ಸರಿಯಲ್ಲ. ಆದರೂ ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆ ಉಂಟುಮಾಡಿದೆ ಎಂದು ಹೇಳಬಹುದು.
– ಕೆ.ವಿ.ವಾಸು, ಮೈಸೂರು





