ಮೈಸೂರು: ಹಳದಿ–ಕೆಂಪಿನ ರಂಗು… ಕನ್ನಡದ ಕಂಪು… ಕರುನಾಡೆಲ್ಲ ರಾಜ್ಯೋತ್ಸವದ ಸಂಭ್ರಮ!
ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ ಸ್ಮರಿಸುವ ಸುದಿನವಿದು. ಕನ್ನಡಕ್ಕಾಗಿ ದುಡಿದ ಮಹನೀಯರನ್ನು ನೆನೆಯುತ್ತಾ, ಭಾಷೆಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ.
ಜನಪದ ಗೀತೆಗಳ ಸೊಗಸು, ಡೊಳ್ಳು ಕುಣಿತದ ಸದ್ದು, ಕನ್ನಡ ಹಾಡುಗಳ ಮೆರುಗು… ರಾಜ್ಯೋತ್ಸವವೆಂದರೆ ಕನ್ನಡಿಗರ ಮನಗಳನ್ನು ಬೆಸೆಯುವ ಹೆಮ್ಮೆಯ ಹಬ್ಬ!
ಕನ್ನಡ ಕೇವಲ ಭಾಷೆಯಲ್ಲ… ನಮ್ಮ ಬದುಕು, ನಮ್ಮ ಗುರುತು, ನಮ್ಮ ಭಾವನೆ. ಮಾತಿನಲ್ಲಿ ಕನ್ನಡವಿರಲಿ, ಓದಿನಲ್ಲಿ ಕನ್ನಡವಿರಲಿ, ದಿನನಿತ್ಯದ ವ್ಯವಹಾರದಲ್ಲೂ ಕನ್ನಡವಿರಲಿ.
ನವೆಂಬರ್‌ಗೆ ಮಾತ್ರ ಸೀಮಿತವಾಗದೆ, ವರ್ಷದ ಪ್ರತಿದಿನವೂ ಕನ್ನಡವನ್ನು ಸಂಭ್ರಮಿಸೋಣ. ಮುಂದಿನ ಪೀಳಿಗೆಗೂ ಕನ್ನಡದ ಸೊಗಡನ್ನು ಪರಿಚಯಿಸೋಣ.
ಎಲ್ಲರಿಗೂ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಸಿರಿಗನ್ನಡಂ ಗೆಲ್ಗೆ… ಸಿರಿಗನ್ನಡಂ ಬಾಳ್ಗೆ!




