Mysore
27
overcast clouds

Social Media

ಶನಿವಾರ, 07 ನವೆಂಬರ್ 2026
Light
Dark

ಓದುಗರ ಪತ್ರ: ತಿಳಿ ವಾತಾವರಣ ರಾಡಿ ಮಾಡಬಾರದು

ಓದುಗರ ಪತ್ರ

ಮೈಸೂರು ಅರಮನೆ, ಚಿನ್ನದ ಅಂಬಾರಿ, ವಜ್ರಖಚಿತ ಸಿಂಹಾಸನ ಅಂದು..ಇಂದು.. ಮುಂದು.. ಎಂದೆಂದಿಗೂ ಮೈಸೂರು ರಾಜಮನೆತನದ ಖಾಸಗಿ ಸ್ವತ್ತಾಗಿದ್ದು, ಸರ್ಕಾರ ಇದರ ಮೇಲೆ ಯಾವುದೇ ರೀತಿಯ ಹಕ್ಕು ಅಥವಾ ಅಧಿಕಾರ ಹೊಂದಿರುವುದಿಲ್ಲ ಎಂದು ಮೈಸೂರು ರಾಜವಂಶಸ್ಥರಾದ ಪ್ರಮೋದದೇವಿ ಒಡೆಯರ್ ಅವರು ಪ್ರತಿಪಾದಿಸರುವುದು ಒಪ್ಪಿಕೊಳ್ಳತಕ್ಕದ್ದೆ.

ರಾಜ್ಯದ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ ಕಟ್ಟಲು ತಮ್ಮ ಒಡವೆಗಳನ್ನು ಮಾರಿದ ರಾಜಮನೆತನದ ವಂಶಸ್ಥರು ಮೈಸೂರು ಅರಮನೆಯಲ್ಲಿ ವಾಸಿಸುವ ಭಾಗಕ್ಕೆ ದೀರ್ಘಕಾಲದವರೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಅಂದಿನ ಸರ್ಕಾರದ ನಿಲುವು ಖಂಡನೀಯ ಹಾಗೂ ಇದು ಎಂತಹವರಿಗೂ ಮನಕಲಕುವ ಸಂಗತಿ .

ಯದುವಂಶಸ್ಥದ ಉತ್ತರಾಧಿಕಾರಿಗಳಾದ ನಾವು ನಮ್ಮ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಯನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದು ಮುಂದೆಯೂ ಮುಂದುವರಿಸುತ್ತೇವೆ.ನಾವು ಸರ್ಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೊಂದರೆ ನೀಡುವುದಿಲ್ಲ, ಹಾಗೆ ಸರ್ಕಾರ ಕೂಡ ರಾಜಮನೆತನದ ಆಚರಣೆಗಳಿಗೆ ತೊಂದರೆ ನೀಡಬಾರದು ಹಾಗೂ ಈ ಬಾರಿಯ ದಸರಾ ಸಂದರ್ಭದಲ್ಲಿ ನಮ್ಮ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗೆ ಅಡ್ಡಿಯಾಗಿದೆ.ಈ ವಿಷಯದಲ್ಲಿ ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿರುವುದು ಸ್ವಾಗತಾರ್ಹ. ಸರ್ಕಾರ ಮಾತುಕತೆಗೆ ಬಂದರೆ ಏನೇ ಸಮಸ್ಯೆ ಇದ್ದರೂ ಸೌಹಾರ್ದ ಯುತವಾಗಿ ಪರಿಹಾರ ಮಾಡಿಕೊಳ್ಳಲು ನಾವು ಮುಕ್ತ ಮನಸ್ಸು ಹೊಂದಿ ದ್ದೇವೆ ಎಂದು ಪ್ರಮೋದಾದೇವಿ ಒಡೆಯರ್ ಅವರು ಹೇಳಿರುವುದು ಮೆಚ್ಚುವಂತಹದು. ವಾತಾವರಣ ಹೀಗಿರಬೇಕಾದರೆ ಇದನ್ನು ಮತ್ತೆ ರಾಡಿ ಮಾಡಲು ಯಾರೂ ಮುಂದಾಗಬಾರದು ಅಷ್ಟೆ.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

Tags:
error: Content is protected !!