Mysore
24
light rain

Social Media

ಬುಧವಾರ, 16 ಜುಲೈ 2025
Light
Dark

ಓದುಗರ ಪತ್ರ| ಕ್ರೀಡಾ ದಿನವನ್ನೇ ಮರೆತ ಮಾಧ್ಯಮಗಳು

ಹಾಕಿ ಮಾಂತ್ರಿಕ ಎಂದು ಕರೆಸಿಕೊಳ್ಳುತ್ತಿದ್ದ ಭಾರತೀಯ ಹಾಕಿ ತಂಡದ ಮಾಜಿ ಆಟಗಾರ ಧ್ಯಾನ್‌ಚಂದ್ ಭಾರತೀಯ ಕ್ರೀಡಾರಂಗದ ಅನರ್ಥ್ಯ ರತ್ನ ಎಂದರೆ ತಪ್ಪಾಗಲಾರದು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿಯೇ ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಇಂತಹ ಮಹಾನ್ ಕ್ರೀಡಾಪಟುವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 29ರ ಧ್ಯಾನ್‌ಚಂದ್

ಜನ್ಮದಿನವನ್ನು ಸರ್ಕಾರ ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಇಂತಹ ಅರ್ಥಪೂರ್ಣ ದಿನವನ್ನು ಮಾಧ್ಯಮಗಳು ಮರೆತು ಹೋಗಿರುವುದು ಬೇಸರದ ಸಂಗತಿ. ಮಾಧ್ಯಮಗಳು ನಟ ದರ್ಶನ್ ಪ್ರಕರಣ, ರಾಜಕೀಯ ಮೇಲಾಟಗಳು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ತಳಕು ಹಾಕಿರುವ ಮುಡಾ ಹಗರಣದ ಸುದ್ದಿಗಳನ್ನೇ ದಿನವಿಡೀ ಬಿತ್ತರಿಸುವಲ್ಲಿ ಮುಳುಗಿ ಹೋಗಿದ್ದು, ರಾಷ್ಟ್ರೀಯ ಕ್ರೀಡಾ ದಿನವನ್ನೇ ಮರೆತುಬಿಟ್ಟಿವೆ. ಬೆಳಿಗ್ಗೆಯಿಂದ ಸಂಜೆಯವರೆಗೂ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಕರೆದೊಯ್ದ ಸುದ್ದಿಯನ್ನೇ ಬಿತ್ತರಿಸಿದ ಮಾಧ್ಯಮಗಳು, ಪೊಲೀಸರೊಂದಿಗೆ ತಾವೂ ಪ್ರಯಾಣಿಸಿ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಬಿಟ್ಟು ಬಂದಿವೆ.

ಮಾಧ್ಯಮಗಳು ಮತ್ತು ದರ್ಶನ್ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿರಬಹುದು. ಹಾಗೆಂದ ಮಾತ್ರಕ್ಕೆ ಅದರ ಸೇಡು ತೀರಿಸಿಕೊಳ್ಳಲು ಪದೇ ಪದೇ ದರ್ಶನ್ ಪ್ರಕರಣದ ಸುದ್ದಿಯನ್ನೇ ಬಿತ್ತರಿಸಿ ವೀಕ್ಷಕರಿಗೆ ಬೇಸರ ತರುವುದು ಸರಿಯೇ?

ಭಾರತದಲ್ಲಿ ಕ್ರೀಡೆಗೆ ಅಷ್ಟಾಗಿ ಮಹತ್ವ ಸಿಗುತ್ತಿಲ್ಲ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಕೊಡುತ್ತಿದ್ದಾರೆಯೇ ವಿನಾ ಕ್ರೀಡಾಸಕ್ತಿ ಮೂಡಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಧ್ಯಾನ್‌ಚಂದ್‌ರಂತಹ ಕ್ರೀಡಾ ಸಾಧಕರ ಬಗ್ಗೆ ಸುದ್ದಿ ಬಿತ್ತರಿಸಿ ಜನರಲ್ಲಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಬೇಕಿತ್ತು. ಇಂತಹ ಜವಾಬ್ದಾರಿಯನ್ನೇ ಮಾಧ್ಯಮಗಳು ಮರೆತದ್ದು ನಿಜಕ್ಕೂ ಬೇಸರದ ಸಂಗತಿ.

-ಕೆ.ಎಸ್.ಸುರೇಶ್, ಮುಖ್ಯ ಶಿಕ್ಷಕರು, ಸರಗೂರು.

Tags:
error: Content is protected !!