Mysore
22
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಓದುಗರ ಪತ್ರ: ರೈಲು ನೀರಿನ ಬಾಟಲಿಗೆ ಒಂದು ರೂ. ಹೆಚ್ಚು ವಸೂಲಿ!

ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ ಮಾರಾಟ ವ್ಯವಸ್ಥೆಯೂ ಇದೆ.

ಆದರೆ ಈ ಬಾಟಲಿ ನೀರು ಮಾರಾಟ ಮಾಡುವವರು ಒಂದು ರೂ.ಹೆಚ್ಚುವರಿಯಾಗಿ ಪ್ರಯಾಣಿಕರಿಂದ ಪಡೆಯುತ್ತಾರೆ. ಪ್ರಸುತ್ತರೈಲು ನೀರಿನ ನಿಗದಿತ ಬೆಲೆಯ ೧೪ರೂ.ಗಳಿದ್ದರೂ ೧೫ ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ನೈಋತ್ಯ ರೈಲ್ವೆ ವಲಯಕ್ಕೆ ಸೇರಿದ ರೈಲು ನಿಲ್ದಾಣಗಳ ಪ್ಲಾಟ್ ಫಾರಂಗಳಲ್ಲಿ ಒಂದು ರೂ. ಹೆಚ್ಚುವರಿ ವಸೂಲಿ ಮಾಡುತ್ತಿದ್ದಾರೆ. ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ನಿಗದಿತ ಮೊತ್ತವನ್ನಷ್ಟೆ ಪ್ರಯಾಣಿಕರಿಂದ ಪಡೆಯುವಂತೆ ಕ್ರಮ ಕೈಗೊಳ್ಳಬೇಕಾಗಿದೆ. ಹಾಗೆಯೇ ಇತರ ವಸ್ತುಗಳ ಬೆಲೆಯನ್ನೂ ಪರಿಶೀಲಿಸಿ ಎಂಆರ್‌ಪಿ ಬೆಲೆಗೆ ಮಾರಾಟ ಮಾಡುವಂತೆ ಸೂಚನೆ ನೀಡಬೇಕಾಗಿದೆ.

-ನಾಗೇಶ್ , ಮಾನಸಗಂಗೋತ್ರಿ, ಮೈಸೂರು

Tags:
error: Content is protected !!