Mysore
21
overcast clouds

Social Media

ಶುಕ್ರವಾರ, 27 ನವೆಂಬರ್ 2026
Light
Dark

ಓದುಗರ ಪತ್ರ: ನ್ಯಾಯಾಂಗದ ಸದೃಢತೆಯ ಪುಷ್ಟೀಕರಣ

dgp murder case

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲೆಯ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯವರಿಗೆ ರಾಜ್ಯ ಉಚ್ಚ ನ್ಯಾಯಾಲಯ ಮಂಜೂರು ಮಾಡಿದ್ದ ಜಮೀನನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿ, ಎರಡು ವಾರಗಳ ಒಳಗೆ ಸೆಷನ್ಸ್ ಕೋರ್ಟಿಗೆ ಶರಣಾಗುವಂತೆ ಸೂಚಿಸಿದೆ.

೨೦೨೩ರ ರಾಜ್ಯ ವಿಧಾನ ಸಭೆ ಚುನಾವಣೆ ಯಲ್ಲಿ ಗೆದ್ದ ನಂತರ, ಮೇಲ್ಕಂಡ ಪ್ರಕರಣದ ಆರೋಪಿಯಾಗಿದ್ದ ವಿನಯ್ ಕುಲಕರ್ಣಿ ಬಹುತೇಕ ಜೈಲಿನಲ್ಲಿಯೇ ಇದ್ದರು. ಜಮೀನು ಮತ್ತು ಪರೋಲ್ ಮೇಲೆ ಎರಡು ಬಾರಿ ಜೈಲಿನಿಂದ ಹೊರಬಂದಿದ್ದ ಅವರು ಮರಳಿ ಮನೆಗೆ ಅನ್ನುವ ಹಾಗೆ ಈಗ ಮತ್ತೆ ಜೈಲಿಗೆ ಹೋಗಬೇಕಾಗಿದೆ. ಈ ಪ್ರಕರಣದ ಅಂತಿಮ ತೀರ್ಪನ್ನು ವಿಚಾರಣಾ ನ್ಯಾಯಾಲಯವು ಕಳೆದ ಏಪ್ರಿಲ್ ೧೭ ರಂದು ಪ್ರಕಟಿಸಿ, ವಿನಯ್ ಕುಲಕರ್ಣಿ ಸೇರಿದಂತೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ದೇಶಾದ್ಯಂತ ರೀತಿಯ ಹಲವಾರು ಪ್ರಕರಣಗಳಲ್ಲಿ, ಕೊಲೆ ಆರೋಪಿಗಳಿಗೆ ಸಂಬಂಧಪಟ್ಟ ಉಚ್ಚ ನ್ಯಾಯಾಲಯ ಜಮೀನು ನೀಡಿದ ಕ್ರಮವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಸರ್ವೋಚ್ಚ ನ್ಯಾಯಾಲಯದ ಇಂತಹ ನಡೆ ನ್ಯಾಯಾಂಗದ ಸದೃಢತೆಯನ್ನು ಪುಷ್ಟೀಕರಿಸಿ, ದೇಶದಲ್ಲಿ ಕಾನೂನಿನ ಪ್ರಕಾರವಾದ ಆಡಳಿತ ( ರೂಲ್ ಆಫ್ ಲಾ ) ಜೀವಂತವಾಗಿದೆ ಎಂಬುದನ್ನು ಒತ್ತಿ ಹೇಳಿದೆ.

-ಕೆ.ವಿ.ವಾಸು, ಮೈಸೂರು

Tags:
error: Content is protected !!