Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಓದುಗರ ಪತ್ರ: ಸರಿಗಮ ವಿಜಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ

ಸರಿಗಮ ವಿಜಿ ಎಂದೇ ಖ್ಯಾತರಾಗಿದ್ದ ಹಾಸ್ಯ ನಟ, ಸಹಾಯಕ ನಿರ್ದೇಶಕ, ರಂಗ ಕರ್ಮಿ , ೭೬ ವರ್ಷ ವಯಸ್ಸಿನ ವಿಜಯಕುಮಾರ್ ರವರು ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಟೈಗರ್ ಪ್ರಭಾಕರ್‌ರವರ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಸರಿಗಮ ವಿಜಿ ಮತ್ತು ಖ್ಯಾತ ಹಾಸ್ಯ ನಟಿ ಉಮಾಶ್ರೀಯವರ ಜೋಡಿ ಹೆಚ್ಚು ಜನಪ್ರಿಯವಾಗಿತ್ತು. ತಮ್ಮದೇ ಆದ ಶೈಲಿಯಲ್ಲಿ ಡೈಲಾಗ್ ಡೆಲಿವರಿ ಮಾಡುವ ಮೂಲಕ ಪ್ರೇಕ್ಷಕರನ್ನು ನಕ್ಕುನಗಿಸುತ್ತಿದ್ದ ವಿಜಿರವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ವಿಜಿರವರು ಅನೇಕ ಕಷ್ಟ ಕಾರ್ಪಣ್ಯಗಳ ನಡುವೆಯೂ ಕಲೆಯನ್ನು ನಂಬಿ ಬದುಕನ್ನು ಕಟ್ಟಿಕೊಂಡವರು. ಪ್ರತಿಯೊಬ್ಬ ಹಾಸ್ಯನಟರ ಬದುಕಿನ ಹಿಂದೆ ಸಾಕಷ್ಟು ಕಷ್ಟಗಳಿರುತ್ತವೆ. ಕನ್ನಡ ಹಾಸ್ಯ ದಿಗ್ಗಜರಾದ ಬಾಲ ಕೃಷ್ಣ, ನರಸಿಂಹರಾಜು, ರತ್ನಾಕರ, ಮುಸುರಿ ಕೃಷ್ಣಮೂರ್ತಿರವರಂತಹ ಹಲವು ಕಲಾವಿದರು ನೋವಿನ ಬಾಣಲೆಯಲ್ಲೇ ಬೆಂದು ಮೇಲೆದ್ದವರು. ಸಿನಿಮಾದಲ್ಲಿ ಕಡಿಮೆ ಸಂಭಾವನೆ ಪಡೆಯುತ್ತಿದ್ದರೂ ಕಲೆಯನ್ನು ನಂಬಿ ಬದುಕಿದವರು. ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಾದರೂ ಹಿರಿಯ ಕಲಾವಿದರಿಗೆ ಸೂಕ್ತ ನೆರವನ್ನು ಕಲ್ಪಿಸುವುದು ಅಗತ್ಯ.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

Tags: