Mysore
14
few clouds

Social Media

ಗುರುವಾರ, 22 ಜನವರಿ 2026
Light
Dark

ಓದುಗರ ಪತ್ರ: ಕುಸಿದ ಸೇತುವೆ ದುರಸ್ತಿ ಮಾಡಿ

ಓದುಗರ ಪತ್ರ

ಎಚ್.ಡಿ.ಕೋಟೆ ತಾಲ್ಲೂಕು ಹೈರಿಗೆ ಗ್ರಾಮದ ಬಳಿ ಇರುವ ಹೆಬ್ಬಾಳ ಎಡದಂಡೆ ನಾಲೆಯ ಸೇತುವೆ ಕುಸಿದು ಎರಡು ವರ್ಷಗಳು ಕಳೆದರೂ ಇನ್ನೂ ದುರಸ್ತಿ ಮಾಡಿಲ್ಲ. ಕಲ್ಲು ಕಟ್ಟಡ ನಿರ್ಮಿಸಿ ಚಪ್ಪಡಿ ಕಲ್ಲಿನಿಂದ ಸ್ಲ್ಯಾಬ್ ಅಳವಡಿಸಲಾಗಿತ್ತು. ಸದರಿ ಸೇತುವೆಯ ಕಲ್ಲಿನ ಚಪ್ಪಡಿ ಸ್ಲ್ಯಾಬ್ ಕುಸಿದಿರುವುದರಿಂದ ಎತ್ತಿನ ಗಾಡಿ, ದನಕರುಗಳು ಹಾಗೂ ಇತರೆ ವಾಹನಗಳು ಗ್ರಾಮವನ್ನು ಬಳಸಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ರೈತರಿಗೆ ಹೊಲಗದ್ದೆಗಳಿಗೆ ತೆರಳಲು ಸುತ್ತಿ ಬಳಸಿ ಬರಬೇಕಾಗಿದೆ.

ಸೇತುವೆಯನ್ನು ದುರಸ್ತಿ ಪಡಿಸಲು ಶಾಸಕರು ಹಾಗೂ ಎಚ್.ಡಿ. ಕೋಟೆ ತಾರಕ ಮತ್ತು ಹೆಬ್ಬಾಳ ನಾಲಾ ವಿಭಾಗ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟವರು ಕೂಡಲೇ ಸೇತುವೆಯನ್ನು ದುರಸ್ತಿ ಪಡಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.

– ಸಿದ್ದಲಿಂಗೇಗೌಡ ಹೈರಿಗೆ, ಎಚ್.ಡಿ.ಕೋಟೆ ತಾ

Tags:
error: Content is protected !!