ಮೈಸೂರಿನ ಶ್ರೀರಾಂಪುರ ಎರಡನೇ ಹಂತದಲ್ಲಿರುವ ಮಧುವನ ಬಡಾವಣೆಯಲ್ಲಿರುವ ಮಧುವನ ಪಾರ್ಕ್ ವಾಯುವಿಹಾರಿಗಳ ನೆಚ್ಚಿನ ತಾಣವಾಗಿದೆ. ೬೪ನೇ ವಾರ್ಡ್ ವ್ಯಾಪ್ತಿಗೊಳಪಡುವ ಈ ಪಾರ್ಕ್‌ನ ವಾಕಿಂಗ್ ಪಾತ್‌ನಲ್ಲಿ ಅಳವಡಿಸಿರುವ ಟೈಲ್ಸ್‌ಗಳು ಮರದ ಬೇರುಗಳಿಂದಾಗಿ ಉಬ್ಬಿರುವು ದರಿಂದ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ವಾಕಿಂಗ್ ಮಾಡಲು ತೊಂದರೆಯಾಗಿದೆ. ಮಕ್ಕಳ ಆಟದ ಅಂಗಳದಲ್ಲಿ ಸಾಕಷ್ಟು ದೀಪಗಳು ಇಲ್ಲದೇ ತೊಂದರೆಯಾಗಿದೆ.
ವಾಕಿಂಗ್ ಪಾತ್‌ನಲ್ಲೂ ಸಾಕಷ್ಟು ದೀಪಗಳಿಲ್ಲದೇ ಕತ್ತಲಾದ ಮೇಲೆ ವಾಯುವಿಹಾರ ಮಾಡುವವರಿಗೆ ತೊಂದರೆಯಾಗಿದೆ. ಸಂಜೆ ಸೊಳ್ಳೆಗಳ ಹಾವಳಿಯೂ ಮಿತಿ ಮೀರಿದೆ. ಸಂಬಂಧಪಟ್ಟವರು ಕೂಡಲೇ ವಾಕಿಂಗ್ ಪಾತ್‌ನಲ್ಲಿ ಅಡ್ಡಿಯಾಗಿರುವ ಮರದ ಬೇರುಗಳನ್ನು ಕೂಡಲೇ ತೆರವುಗೊಳಿಸಬೇಕು. ವಾಕಿಂಗ್ ಪಾತ್ ಹಾಗೂ ಮಕ್ಕಳ ಆಟದ ಅಂಗಳಲ್ಲಿ ದೀಪಗಳನ್ನು ಅಳವಡಿಸಬೇಕು ಹಾಗೂ ವಾರಕ್ಕೊಮ್ಮೆಯಾದರೂ -ಗಿಂಗ್ ಮಾಡುವ ಮೂಲಕ ಸೊಳ್ಳೆಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ಎಂ. ಎಸ್. ಉಷಾ ಪ್ರಕಾಶ್, ಎಸ್. ಬಿ.ಎಂ.ಕಾಲೋನಿ, ಮೈಸೂರು





