ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ೨೦೨೩-೨೪ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡವರಿಗೆ ಪರಿಹಾರವನ್ನು ಘೋಷಿಸಿತ್ತು. ಆದರೆ, ಸರ್ಕಾರ ಬದಲಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಹಾರ ಮೊತ್ತದ ಕೊನೆಯ ಕಂತನ್ನು ಬಾಕಿ ಉಳಿಸಿಕೊಂಡಿದ್ದು, ಫಲಾನುಭವಿ ಗಳು ಮನೆ ಪೂರ್ಣಗೊಳಿಸಲು ಪರದಾಡುವಂತಾಗಿದೆ.
ಸರ್ಕಾರ ಮನೆಗಳ ಹಾನಿಯ ಪ್ರಮಾಣವನ್ನು ಪರಿಗಣಿಸಿ ಪರಿಹಾರನ್ನು ಘೋಷಿಸಿತ್ತು. ಹೆಚ್ಚು ಹಾನಿಯಾದ ಮನೆಗಳಿಗೆ ೩ ಲಕ್ಷ ರೂ.ಗಳಿಂದ ೫ ಲಕ್ಷ ರೂ.ಗಳವರೆಗೂ ಪರಿಹಾರವನ್ನು ಘೋಷಿಸಿತ್ತು. ಆದರೆ ಸರ್ಕಾರ ಬದಲಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಲಕ್ಷ ರೂ. ಪರಿಹಾರ ಮೊತ್ತದ ಕೊನೆಯ ಕಂತಿನಲ್ಲಿ ೨೫,೦೦೦ ರೂ. ಗಳನ್ನು ಬಾಕಿ ಉಳಿಸಿಕೊಂಡಿದೆ. ಕೊನೆಯ ಬಿಲ್‌ನಲ್ಲಿ ಸರ್ಕಾರ ಫಲಾನುಭವಿಗಳ ಖಾತೆಗೆ ೮೦,೦೦೦ ರೂ.ಗಳನ್ನು ಮಾತ್ರ ಹಾಕಿದ್ದು, ಉಳಿದ ೨೫,೦೦೦ ರೂ. ಗಳನ್ನು ಬಾಕಿ ಉಳಿಸಿಕೊಂಡಿದೆ. ಹಾಗೆಯೇ ಬಸವ ಕಲ್ಯಾಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ೨೦೨೩-೨೪ನೇ ಸಾಲಿನ ಫಲಾನುಭವಿಗಳ ಖಾತೆಗೂ ಹಣ ಮಂಜೂರು ಮಾಡಿ, ಬಳಿಕ ಆ ಹಣವನ್ನು ಸರ್ಕಾರವೇ ಹಿಂಪಡೆದುಕೊಂಡಿದೆ. ಇದರಿಂದ ಮನೆ ಕಳೆದುಕೊಂಡವರು ಮನೆಯನ್ನು ಪೂರ್ಣವಾಗಿ ನಿರ್ಮಿಸಿಕೊಳ್ಳಲಾಗದೆ ಪರದಾಡುವಂತಾಗಿದೆ. ಇದರೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮನೆಗಳಿಗೂ ಸರಿಯಾಗಿ ಪರಿಹಾರವನ್ನು ನೀಡಿಲ್ಲ. ಇದರಿಂದಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಬಡಜನರು ಪರದಾಡುವಂತಾಗಿದ್ದು, ಸರ್ಕಾರ ಈ ಬಗ್ಗೆ ಕ್ರಮವಹಿಸಿ ಆದಷ್ಟು ಬೇಗ ಪರಿಹಾರವನ್ನು ನೀಡಬೇಕು.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.





