Mysore
28
overcast clouds

Social Media

ಬುಧವಾರ, 04 ನವೆಂಬರ್ 2026
Light
Dark

ಓದುಗರ ಪತ್ರ: ಎಫ್‌ಡಿ ಠೇವಣಿದಾರರ ಹಿತ ರಕ್ಷಿಸಿ

ಅಕ್ಟೋಬರ್ ತಿಂಗಳ ಆರಂಭದಲ್ಲಿ ಆರ್‌ಬಿಐ ರೆಪೊ ದರವನ್ನು ಶೇ .೫.೨೫ ರಿಂದ ಶೇ ೫.೫೦ ಕ್ಕೆ ಏರಿಸಿತು. ಕೂಡಲೇ ಬ್ಯಾಂಕ್ ಗಳ ಸಾಲದ ಮೇಲಿನ ಇಎಂಐ ಕೂಡ ಪರಿಷ್ಕರಣೆಯಾಯಿತು. ಸಾಲದ ಮೇಲಿನ ಬಡ್ಡಿ ಹೊರೆ ಹೆಚ್ಚಾಯಿತು. ಆದರೆ ಇದಕ್ಕಿಂತ ಹಿಂದಿನ ೪ ಬಾರಿ ಆರ್‌ಬಿಐ ರೆಪೊ ದರವನ್ನು ಇಳಿಸಿದಾಗ ಬ್ಯಾಂಕ್‌ಗಳು ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಯನ್ನು ಕಡಿತಗೊಳಿಸುತ್ತಾ ಬಂದವು. ಪರಿಣಾಮ ಎಫ್ಡಿ ಮೇಲಿನ ಬಡ್ಡಿ ಶೇ ೧.೨೫ ರಷ್ಟು ರಷ್ಟು ಇಳಿಕೆಯಾಯಿತು. ರೆಪೊ ಇಳಿಕೆ ಯಾದಗಲೆಲ್ಲ ಬ್ಯಾಂಕ್ ಗಳು ಪೂರ್ವಾನ್ವಯವಾಗಿ ಎಫ್‌ ಡಿ ಮೇಲಿನ ಬಡ್ಡಿ ಯನ್ನು ಇಳಿಕೆ ಮಾಡುತ್ತಾ ಬಂದವು. ಇದರಿಂದ ಎ-ಡಿ ಮೇಲಿನ ಬ್ಯಾಂಕ್ ಬಡ್ಡಿ ಯಿಂದಲೇ ಜೀವನ ನಿರ್ವಹಣೆ ಮಾಡುವ ಮಂದಿಗೆ, ಅದರಲ್ಲೂ ನಿವೃತ್ತರು ನಷ್ಟವನ್ನು ಅನುಭವಿಸಿದರು. ಇದೀಗ ಆರ್ ಬಿ ಐ ರೆಪೊ ದರವನ್ನು ಏರಿಕೆ ಮಾಡಿದೆ, ಬ್ಯಾಂಕ್ ಸಾಲದ ಮೇಲಿನ ಇ ಎಂ ಐ ಅನ್ನು ಕೂಡ ಏರಿಸಿವೆ. ಆದರೆ ಎ- ಡಿ ಮೇಲಿನ ಬಡ್ಡಿಯನ್ನು ಏರಿಕೆ ಮಾಡದೆ ಠೇವಣಿದಾರರಿಗೆ ವಂಚನೆ ಮಾಡಿವೆ. ಈ ಬಗ್ಗೆ ಆರ್‌ಬಿಐ,ಕೇಂದ್ರ ಸರ್ಕಾರ ಕ್ರಮ ವಹಿಸಿ ಠೇವಣಿದಾರರ /ಹಿರಿಯ ನಾಗರಿಕರ ಹಿತ ರಕ್ಷಣೆ ಮಾಡುವ ಅವಶ್ಯಕತೆ ಇದೆ.

-ಮುಳ್ಳೂರು ಪ್ರಕಾಶ್, ಮೈಸೂರು

Tags:
error: Content is protected !!