Mysore
26
overcast clouds

Social Media

ಗುರುವಾರ, 07 ಮೇ 2026
Light
Dark

ಓದುಗರ ಪತ್ರ: ಚಿನ್ನದ ಹೆಸರಿನಲ್ಲಾಗುವ ವಂಚನೆಯನ್ನು ತಡೆಗಟ್ಟಿ

ಚಿನ್ನದ ಹೂಡಿಕೆಯ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಅತ್ಯಂತ ಸಂಕೀರ್ಣವೂ ಮತ್ತು ವ್ಯವಸ್ಥಿತವೂ ಆಗಿದೆ. ವಂಚಕರು ಮುಖ್ಯವಾಗಿ ಪೊಂಜಿ ಮಾದರಿಯ ಯೋಜನೆಗಳನ್ನು ಬಳಸಿ ಅಲ್ಪಾವಧಿಯಲ್ಲಿ ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ಆರಂಭದಲ್ಲಿ ನಂಬಿಕೆ ಗಳಿಸಿ ನಂತರ ಕೋಟ್ಯಂತರ ರೂಪಾಯಿಗಳೊಂದಿಗೆ ನಾಪತ್ತೆಯಾಗುತ್ತಿದ್ದಾರೆ. ಇತ್ತೀಚಿನ ಐಸಿಐಸಿಐ ಬ್ಯಾಂಕ್ ಹಗರಣದಲ್ಲಿ ಕಂಡುಬಂದಂತೆ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನದ ಪ್ಯಾಕೆಟ್‌ಗಳನ್ನು ಅಡವಿಟ್ಟು ರೂ.೨೩ ಕೋಟಿ ಸಾಲ ಪಡೆಯುವಂತಹ ಲೋನ್ ವಂಚನೆ ಜಾಲಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಲುಗಾಡಿಸುತ್ತಿವೆ. ಇದಲ್ಲದೆ ಅಸ್ತಿತ್ವದಲ್ಲಿಲ್ಲದ ಚಿನ್ನದ ಗಣಿಗಳಲ್ಲಿ ಹೂಡಿಕೆ ಅಥವಾ ಸುರಕ್ಷಿತ ಲಾಕರ್‌ನಲ್ಲಿ ಚಿನ್ನ ಇಟ್ಟಿರುವುದಾಗಿ ನಂಬಿಸುವ ಡಿಜಿಟಲ್ ಗೋಲ್ಡ್ ವಂಚನೆಗಳು ಹೆಚ್ಚಾಗುತ್ತಿವೆ. ಮಾರುಕಟ್ಟೆಯಲ್ಲಿ ಕೃತಕವಾಗಿ ಷೇರು ಬೆಲೆ ಏರಿಸಿ ಹೂಡಿಕೆದಾರರನ್ನು ಸೆಳೆಯುವ ಪಂಪ್ ಅಂಡ್ ಡಂಪ್ ತಂತ್ರಗಳು ಮತ್ತು ನಕಲಿ ಸಾಲದ ಏಜೆಂಟರು ದಾಖಲೆಗಳ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವುದು ಸಾಮಾನ್ಯವಾಗಿದೆ. ಈ ವಂಚಕ ಕಂಪೆನಿಗಳ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವುದರಿಂದ ಸಂತ್ರಸ್ತರು ತಮ್ಮ ಕಳೆದುಹೋದ ಹಣವನ್ನು ಮರಳಿ ಪಡೆಯಲು ಸಾಧ್ಯವಾಗದೆ ವರ್ಷಗಟ್ಟಲೆ ನ್ಯಾಯಾಲಯಗಳಿಗೆ ಅಲೆಯುತ್ತಿದ್ದಾರೆ. ಸರ್ಕಾರ ಇಂತಹ ವ್ಯವಸ್ಥಿತ ಮೋಸದ ಜಾಲವನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು.

-ಡಾ. ಎಚ್.ಕೆ.ವಿಜಯಕುಮಾರ, ಬೆಂಗಳೂರು

Tags:
error: Content is protected !!