ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸಿದೆ. ಭಾರತೀಯ ಸೇನಾಪಡೆಯನ್ನು ಬೆಂಬಲಿಸುವ ಉದ್ದೇಶದಿಂದ ರಾಜ್ಯದಲ್ಲಿ ಕಾಂಗ್ರೆಸ್ ತಿರಂಗಾ ಯಾತ್ರೆ ನಡೆಸಿತು. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ಕೂಡ ಈಗ ತಿರಂಗಾಯಾತ್ರೆ ಕೈಗೊಂಡಿದೆ. ಈಗ ಕಾಂಗ್ರೆಸ್ ಜೈ ಹಿಂದ್ ಯಾತ್ರೆ ಕೈಗೊಳ್ಳಲು ಮುಂದಾಗಿದೆ. ಅಮೆರಿಕ ಮಧ್ಯಪ್ರವೇಶ ಹಾಗೂ ರಾಷ್ಟ್ರೀಯ ಭದ್ರತಾ ನಿರ್ವಹಣೆ ಕುರಿತಂತೆ ಕೇಂದ್ರ ಸರ್ಕಾರ ಮೌನವಾಗಿದೆ ಎಂದು ಆರೋಪಿ ಕಾಂಗ್ರೆಸ್ ಈ ಯಾತ್ರೆಗೆ ತಯಾರಿ ನಡೆಸಿದೆ.
ರಾಜ್ಯದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸ್ವಹಿತಾಸಕ್ತಿಯಿಂದ ಯಾತ್ರೆಗಳ ಪೈಪೋಟಿಗೆ ಇಳಿದಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಜನರ ಹಿತದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕಾದ ಆಡಳಿತ ಪಕ್ಷ, ಅಧಿಕಾರ ಭದ್ರತೆಗೆ ಆದ್ಯತೆ ನೀಡುತ್ತಿರುವುದು ವಿಪರ್ಯಾಸ.
ವಿಪಕ್ಷ ಕೂಡ ಸರ್ಕಾರದ ಲೋಪಗಳನ್ನು ಸಮರ್ಥವಾಗಿ ಜನರ ಮುಂದೆ ಇಡುವುದರಲ್ಲಿ ವಿಫಲವಾಗಿದೆ. ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೇರುವ ಆಸೆಯಿಂದ ಹಾಗೂ ಪಕ್ಷದ ಹೈಕಮಾಂಡ್ ಕೃಪಾಕಟಾಕ್ಷಕ್ಕೆ ಪಾತ್ರವಾಗುವ ಅದಮ್ಯ ಬಯಕೆಯಿಂದ ಪ್ರತಿಭಟನೆ, ಯಾತ್ರೆಯನ್ನು ಮಾಡುತ್ತಿದೆ ಅನಿಸುತ್ತಿದೆ. ಇದೊಂದು ರೀತಿಯಲ್ಲಿ ‘ಅಪ್ಪ-ಅಮ್ಮ’ನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸ್ವಹಿತಾಸಕ್ತಿಯಿಂದ ರಾಜ್ಯದ ಜನರು ಹತಾಶರಾಗಿದ್ದಾರೆ.
-ಆರ್.ವಿ.ಶಿವಾನಂದ, ಕನಕದಾಸನಗರ, ಮೈಸೂರು