ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡದೆ ಎಲ್ಲ ವರ್ಗದ ಜನರನ್ನೂ ಸಮಾನವಾಗಿ ಕಾಣಬೇಕು ಎಂಬುದನ್ನು ಇತ್ತೀಚಿನ ಜನಪ್ರತಿನಿಧಿಗಳು ಮರೆತಿದ್ದಾರೇನೋ ಅನಿಸುತ್ತದೆ.
ಆಕಸ್ಮಿಕವಾಗಿ ಕೋಮುಗಲಭೆಗಳು ಸೃಷ್ಟಿಯಾದರೆ ರಾಜಕಾರಣಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಜನರನ್ನು ಪ್ರಚೋದಿಸಿ ಜಾತಿ, ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಿ ಅದರಿಂದ ರಾಜಕೀಯ ಲಾಭ ಪಡೆಯುವುದೇ ಕೆಲವು ಜನಪ್ರತಿನಿಧಿಗಳ ಕೆಲಸವಾಗಿ ಹೋಗಿದೆ.
ಭಾರತ ಸರ್ವಧರ್ಮಗಳ ಸಮನ್ವಯ ರಾಷ್ಟ್ರ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಧರ್ಮೀಯರು ಯಾವುದೇ ಭೇದವಿಲ್ಲದೆ ಸಹೋದರರಂತೆ ಬದುಕುತ್ತಿದ್ದಾರೆ. ‘ವಿವಿಧತೆಯಲ್ಲಿ ಏಕತೆ’ ಸಾಽಸುವ ಮೂಲಕ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಇದನ್ನೆಲ್ಲ ಮರತೆ ಜನಪ್ರತಿನಿಽಗಳೆನಿಸಿಕೊಂಡವರು ಜಾತಿ ನಿಂದನೆ ಮಾಡುವುದು, ಕೋಮುಗಲಭೆ ನಡೆದಾಗ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ಉದ್ದೇಶ ಪೂರ್ವಕವಾಗಿಯೇ ಗಲಭೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುವುದು ಮುಂತಾದ ಕೃತ್ಯಕ್ಕಿಳಿಯುತ್ತಾರೆ. ಆ ಮೂಲಕ ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಜನಪ್ರತಿನಿಽಗಳು ಇನ್ನಾದರೂ ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡದೇ ಎಲ್ಲ ಧರ್ಮಗಳ ಜನರನ್ನು ಗೌರವಿಸುವ ಮೂಲಕ ಸಮಾನತೆಯ ಸಂದೇಶ ಸಾರುವಂತಾಗಲಿ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.