Mysore
25
broken clouds

Social Media

ಬುಧವಾರ, 13 ನವೆಂಬರ್ 2024
Light
Dark

ಓದುಗರ ಪತ್ರ: ತನಿಖೆಯ ಸತ್ಯಾಸತ್ಯತೆ ಜನರಿಗೂ ತಿಳಿಯಲಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ತಳುಕು ಹಾಕಿಕೊಂಡಿರುವ ಮುಡಾ ಹಗರಣ ಭಾರೀ ಸಂಚಲನ ಸೃಷ್ಟಿಸಿದ್ದು, ಊಹಿಸಲಾರದಷ್ಟರ ಮಟ್ಟಿಗೆ ಹಗರಣ ನಡೆದಿದೆ ಎನ್ನಲಾಗಿದೆ.

ಈ ಸಂಬಂಧ ಇ.ಡಿ. ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ಮಾಡಿ ಸಂಬಂಧಪಟ್ಟ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿ ನಡೆದಿರುವ ಹಗರಣವನ್ನು ನೋಡಿದರೆ ಪ್ರಭಾವಿಗಳೆಲ್ಲ ಒಟ್ಟಿಗೆ ಸೇರಿ ಮಾಡಿರುವುದು ತಿಳಿಯುತ್ತದೆ. ಬಡವರ್ಗದ ಜನರಿಗೆ ಸೇರಬೇಕಾದ ಕೋಟ್ಯಂತರ ರೂ. ಮೌಲ್ಯದ ನಿವೇಶನಗಳು ಭ್ರಷ್ಟ ರಾಜಕಾರಣಿಗಳ ಪಾಲಾಗಿರುವುದು ವಿಪರ್ಯಾಸ. ದಾಳಿ ವೇಳೆ ಮುಡಾ ಅಧಿಕಾರಿಗಳು ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿರುವುದಾಗಿಯೂ ವರದಿಯಾಗಿದೆ.
ಈ ಹಗರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವುದರಿಂದ ಇದರ ತನಿಖೆಯ ಸತ್ಯಾಸತ್ಯತೆಗಳು ಜನರಿಗೂ ಗೊತ್ತಾಗಬೇಕು. ಆದ್ದರಿಂದ ತನಿಖಾ ಅಧಿಕಾರಿಗಳು ತಮ್ಮ ತನಿಖೆಯ ಅಂಶಗಳನ್ನು ಹಾಗೂ ಹಗರಣದಲ್ಲಿ ಸಿಲುಕಿಕೊಂಡಿರುವವರು ನೀಡುವ ಉತ್ತರಗಳನ್ನು ಯಥಾವತ್ತಾಗಿ ಮಾಧ್ಯಮಗಳ ಮೂಲಕ ಜನರಿಗೆ ಮುಟ್ಟಿಸಬೇಕು. ಮುಡಾ ಸ್ವಾಧೀನಕ್ಕೆ ಎಷ್ಟು ನಿವೇಶನಗಳು ಬರಬೇಕು, ಈವರೆಗೂ ಎಷ್ಟು ಅಕ್ರಮ ನಡೆದಿದೆ ಎಂಬುದರ ಮಾಹಿತಿಯನ್ನು ಅಧಿಕಾರಿಗಳು ಜನರ ಮುಂದೆ ತೆರೆದಿಡುವ ಜತೆಗೆ ಭ್ರಷ್ಟರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

-ಎ.ಎಸ್‌.ಗೋಪಾಲಕೃಷ್ಣ, ರಾಮಕೃಷ್ಣನಗರ, ಮೈಸೂರು.

 

Tags: