Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಓದುಗರ ಪತ್ರ: ಇದೇನು ಹಣ ಗಳಿಸುವ ಮಾರ್ಗವೇ?

ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಲಿಂಗಾಂಬುಧಿ ಕೆರೆಯ ಸಮೀಪದ ಸಸ್ಯೋದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಇಲ್ಲಿ ಯಾವುದೇ ಡಿಜಿಟಲ್ ಸೌಲಭ್ಯವಿಲ್ಲದಿರುವುದರಿಂದ ಬರುವ ಪ್ರವಾಸಿಗರು ಹಣ ನೀಡಿಯೇ ಟಿಕೆಟ್ ಪಡೆಯ ಬೇಕು.

ಇದರಿಂದಾಗಿ ಅನೇಕ ಪ್ರವಾಸಿಗರಿಗೆ ತೊಂದರೆ ಯಾಗುತ್ತಿದೆ. ಇನ್ನು ಇಲ್ಲಿ ನಾವು ಪ್ರವೇಶ ಮಾಡುವ ಸಮಯ ಒಂದಾಗಿದ್ದರೆ ಅವರು ಟಿಕೆಟ್‌ನಲ್ಲಿ ನಮೂದಿಸುವ ಸಮಯವೇ ಬೇರೆಯಾಗಿರುತ್ತದೆ. ಇದು ಹೇಗೆ ಎಂದು ನೋಡಿದಾಗ, ಅಲ್ಲಿ ನಮಗೆ ನೀಡಿದ ಟಿಕೆಟನ್ನು ವಾಪಸ್ ಪಡೆದು ಬೇರೆ ಪ್ರವಾಸಿಗರೂ ಅದೇ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ ಎಂಬುದು ತಿಳಿಯಿತು. ಈ ಬಗ್ಗೆ ಪ್ರಶ್ನಿಸಿದರೆ ಅಲ್ಲಿನ ಸಿಬ್ಬಂದಿ ಏರುಧ್ವನಿಯಲ್ಲಿ ಮಾತನಾಡುತ್ತಾರೆ.

ಒಂದೇ ಟಿಕೆಟನ್ನು ಪದೇ ಪದೇ ಮಾರಾಟ ಮಾಡಿ ಹಣ ಗಳಿಸುತ್ತಿರುವುದು ವಂಚನೆಯಲ್ಲವೇ? ದಸರಾ ಎಂದರೆ ಅಕ್ರಮ ವಾಗಿ ಹಣ ಗಳಿಸಲು ಇರುವ ಮಾರ್ಗವೇ? ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದರೆ ಅಲ್ಲಿನ ಸಿಬ್ಬಂದಿ ಜಗಳಕ್ಕೆ ಬರುತ್ತಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ದಸರಾ ಆಚರಣಾ ಸಮಿತಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕಿದೆ.

 

-ಶಿವಮೊಗ್ಗ ನಾ. ದಿನೇಶ್ ಅಡಿಗ, ವಿ. ಗುರುದತ್ತ, ಮೈಸೂರು.

 

Tags: