Mysore
27
broken clouds

Social Media

ಬುಧವಾರ, 15 ಜುಲೈ 2026
Light
Dark

ಓದುಗರ ಪತ್ರ: ಕ್ರಿಕೆಟ್ ಕ್ರೀಡಾಂಗಣಕ್ಕೆ ಡಾ.ಅಂಬೇಡ್ಕರ್ ಹೆಸರಿಡಿ

ಓದುಗರ ಪತ್ರ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ನಿರ್ಮಾಣಗೊಳ್ಳಲಿರುವ ದೇಶದ ಎರಡನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರದಿಂದ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸದ್ಯ, ದೇಶದಲ್ಲಿ ಒಟ್ಟಾರೆಯಾಗಿ ೮೦ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳು ಇದ್ದು, ಹಲವಾರು ಮೈದಾನಗಳಿಗೆ ಅದ್ವಿತೀಯ ಸಾಧನೆ ತೋರಿರುವ ಅಂದಿನ ಜವಾಹರ್ ಲಾಲ್ ನೆಹರು ಅವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿವರೆಗೂ ರಾಷ್ಟ್ರ ನಾಯಕರ ಹೆಸರುಗಳನ್ನು ಇಡಲಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಕ್ರಿಕೆಟ್ ಕ್ರೀಡೆಗೆ ಸಂಬಂಧಿಸಿದ ಒಂದೇ ಒಂದು  ಅಂತಾರಾಷ್ಟ್ರೀಯ ಕ್ರೀಡಾಂಗಣವಿಲ್ಲ. ಆದ ಕಾರಣ, ರಾಜ್ಯದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಳ್ಳಲಿರುವ ವಿಶ್ವ ದರ್ಜೆಯ ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರ ಡಾ.ಅಂಬೇಡ್ಕರ್ ಅವರ ಹೆಸರು ಇಡುವ ಮೂಲಕ ಸಾಮಾಜಿಕ ನ್ಯಾಯದ ಪರ ತಮ್ಮ ಜೀವನ ಪರ್ಯಂತ ಹೋರಾಡಿದ ದಿವ್ಯ ಚೇತನ ಬಾಬಾ ಸಾಹೇಬರಿಗೆ ಗೌರವ ತೋರುವುದು ಅಗತ್ಯ.

– ಅನಿಲ್ ಕುಮಾರ್, ನಂಜನಗೂಡು

Tags:
error: Content is protected !!