Mysore
27
broken clouds

Social Media

ಮಂಗಳವಾರ, 01 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಎಸ್.ಜಾನಕಿ ಅಜರಾಮರ

ದಕ್ಷಿಣ ಭಾರತದ ಕೋಗಿಲೆ ಎಂದೇ ಜನಪ್ರಿಯರಾಗಿದ್ದ, ಎಸ್. ಜಾನಕಿಯವರು ತಮ್ಮ ಅಂತಿಮ ಇಚ್ಛೆಯಂತೆ ಕನ್ನಡದ ನೆಲದಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನ ಪರಿಸರದಲ್ಲಿ ಪ್ರಕೃತಿಯೊಂದಿಗೆ ಲೀನವಾಗಿದ್ದಾರೆ. ಪಕ್ಕದ ಆಂಧ್ರಪ್ರದೇಶಲ್ಲಿ ಜನಿಸಿದ್ದರೂ,ತಾವು ಇಷ್ಟಪಡುತ್ತಿದ್ದ ಮೈಸೂರಿನಲ್ಲಿ ತಮ್ಮ ಜೀವಿತಾವಧಿಯ ಕೊನೆಯ ದಿನಗಳನ್ನು ಕಳೆದಿದ್ದಾರೆ. ಭಾರತದ ೨೦ ಭಾಷೆಗಳಲ್ಲಿ, ೪೮,೦೦೦ ಹಾಡು ಗಳನ್ನು ಹಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಏಳು ದಶಕಗಳ ಸುದೀರ್ಘ ಸಂಗೀತ ಪಯಾಣದಲ್ಲಿ ೪ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ೩೩ ವಿವಿಧ ರಾಜ್ಯ ಸರ್ಕಾರದ ಪ್ರಶಸ್ತಿಗಳು, ೧೦ ಫಿಲಂ ಫೇರ್ ಪ್ರಶಸ್ತಿ ಪಡೆದ ಏಕೈಕ ಹಿನ್ನೆಲೆ ಗಾಯಕಿ. ಇದನ್ನು ಸರಿಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ೨೦೧೩ ರಲ್ಲಿ ತಮಗೆ ಘೋಷಿಸಿದ ಪದ್ಮಭೂಷಣ ಪ್ರಶಸ್ತಿಯನ್ನೇ ನಿರಾಕರಿಸಿದ ದಿಟ್ಟ ಗಾಯಕಿ. ಕನ್ನಡ ಭಾಷೆ ಇರುವ ತನಕವೂ ಎಸ್. ಜನಕಿಯವರ ಹೆಸರು ಅಜರಾಮರವಾಗಿ ಉಳಿಯುತ್ತದೆ.

 -ಬೂಕನಕೆರೆ ವಿಜೇಂದ್ರ,ಮೈಸೂರು

 

Tags:
error: Content is protected !!