Mysore
23
overcast clouds

Social Media

ಭಾನುವಾರ, 01 ನವೆಂಬರ್ 2026
Light
Dark

ಓದುಗರ ಪತ್ರ: ನಗರಪಾಲಿಕೆ ಆಯುಕ್ತರ ಕೆಲಸ ಶ್ಲಾಘನೀಯ

dgp murder case

ಮೈಸೂರು ನಗರಪಾಲಿಕೆ ವತಿಯಿಂದ ಇ-ಖಾತೆ ಅಭಿಯಾನ ಹಾಗೂ ಜನನ-ಮರಣ ಪ್ರಮಾಣ ಪತ್ರವನ್ನು ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಶ್ಲಾಘನೀಯವಾದದ್ದು. ಈ ಎರಡೂ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಗಬೇಕು.ಇ-ಖಾತೆ ಪಡೆಯುವಲ್ಲಿ ಸಾರ್ವಜನಿಕರು ಅನುಭವಿಸುತ್ತಿದ್ದ ತೊಂದರೆಗಳಿಗೆ ವಿರಾಮ ಹೇಳಬೇಕಾಗಿದೆ.ಇದಕ್ಕೆ ಸ್ಪಂದಿಸುತ್ತಿರುವ ಪಾಲಿಕೆ ಆಯುಕ್ತರ ಕ್ರಮಕ್ಕೆ ಮೆಚ್ಚುಗೆ ಸೂಚಿಸಬೇಕಾಗಿದೆ.

ಹಲವು ತಿಂಗಳುಗಳಿಂದ ಇ-ಖಾತೆ ಹಾಗೂ ಜನನ ಮರಣ ಪತ್ರ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದನ್ನು ಬಂಡವಾಳ ಮಾಡಿಕೊಂಡ ಮದ್ಯವರ್ತಿಗಳೂ ಜನರಿಂದ ಸಾಕಷ್ಟು ಹಣ ಸುಲಿಗೆ ಮಾಡುತ್ತಿದ್ದರು.ಸದ್ಯ ೧೭೫ ರೂಪಾಯಿ ಶುಲ್ಕ ಪಾವತಿಸಿ ೩ ದಿನಗಳಲ್ಲಿ ಇ-ಖಾತೆ ಪಡೆಯುವ ಅಭಿಯಾನ ರೂಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

Tags:
error: Content is protected !!