ನವೆಂಬರ್‌ನಿಂದ ಜನವರಿಯವರೆಗೆ ಚಿಕ್ಕ ಮಕ್ಕಳು ಹಾಗೂ ೫೦ರ ನಂತರದ ಮಹಿಳೆಯರು, ಪುರುಷರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾರೆ. ವರ್ಷದಿಂದ ವರ್ಷಕ್ಕೆ ಶಬರಿಯಾತ್ರೆಗೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಕಾಯಿಲೆ ಕಾಣಿಸಿಕೊಂಡಿದೆ. ಇದು ನೀರಿನಿಂದ ಹರಡುವ ಕಾಯಿಲೆಯಾಗಿದ್ದು, ಶಬರಿಮಲೆ ಯಾತ್ರಿಗಳು ಸ್ನಾನ ಮಾಡುವಾಗ ಮೂಗಿನಿಂದ ಅಮೀಬಾ ವೈರಸ್ ಪ್ರವೇಶಿಸದಂತೆ ಜಾಗ್ರತೆ ವಹಿಸಬೇಕಾಗಿದೆ ಎನ್ನಲಾಗಿದೆ.
ಶಬರಿಮಲೆಯಲ್ಲಿ ಯಾತ್ರಿಗಳ ದಟ್ಟಣೆಯಿಂದ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸುವ ಸಾಧ್ಯತೆಯಿರುವುದರಿಂದ ಪ್ರತಿ ದಿನಕ್ಕೆ ನಿಗದಿತ ಸಂಖ್ಯೆಯ ಯಾತ್ರಿಕರನ್ನು ಮಿತಿಗೊಳಿಸುವ ಮೂಲಕ ಕೇರಳ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
-ಎಂ. ಎಸ್. ಉಷಾ ಪ್ರಕಾಶ್, ಎಸ್.ಬಿ.ಎಂ. ಕಾಲೋನಿ, ಮೈಸೂರು





