ತಮಿಳುನಾಡಿನ ‘ತಮಿಳಿಗ ವೆಟ್ರಿ ಕಳಗಂ’ ಪಕ್ಷದ ಸ್ಥಾಪಕ ಜೋಸೆಫ್ ವಿಜಯ್ ಅವರು ಕೇವಲ ಎರಡು ವರ್ಷಗಳ ಹಿಂದೆ ರಾಜಕೀಯ ಪಕ್ಷ ಸ್ಥಾಪಿಸಿ, ರಾಜ್ಯಾದ್ಯಂತ ಸಂಘಟನೆ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ೨೩೪ ಸ್ಥಾನಗಳ ಪೈಕಿ ೧೦೮ ಸ್ಥಾನಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದು, ಅಧಿಕಾರದ ಗದ್ದುಗೆ ಏರಲಿದ್ದಾರೆ. ಜನಪರ ಆಡಳಿತ ನೀಡುವ ಹಂಬಲ ಹೊಂದಿರುವ ವಿಜಯ್ ಅವರು ತಮ್ಮ ಕಾರು ಚಾಲಕನ ಮಗನಿಗೆ ಟಿಕೆಟ್ ನೀಡಿ ಮಾನವೀಯ ಕಾಳಜಿ ಮೆರೆದಿದ್ದಾರೆ.
ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಆಡಳಿತವನ್ನು ಕಂಡಿದ್ದ ಆ ರಾಜ್ಯದ ಜನರು ಪರ್ಯಾಯ ಶಕ್ತಿಯಾಗಿ ವಿಜಯ್ ಅವರನ್ನು ಆಯ್ಕೆ ಮಾಡಿದ್ದು, ಅವರು ಮುಂದಿನ ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸುವ ಮೂಲಕ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು.
– ಎಂ.ಜೆ.ರುದ್ರಮೂರ್ತಿ, ಜಯಲಕ್ಷ್ಮಿ ಬಡಾವಣೆ, ಚಿತ್ರದುರ್ಗ



