Mysore
22
overcast clouds

Social Media

ಶುಕ್ರವಾರ, 13 ಜೂನ್ 2025
Light
Dark

ಓದುಗರ ಪತ್ರ| ತಪ್ಪಿಲ್ಲ ಎಂದಾದರೆ ತನಿಖೆ ಎದುರಿಸಲಿ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.

ಇದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಿರುವುದಂತೂ ನಿಜ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಜವಾಬ್ದಾರಿಯುತವಾಗಿ ವರ್ತಿಸಬೇಕು.

ರಾಜ್ಯಪಾಲರು ತಾವು ಎಲ್ಲ ಆಯಾಮ ಗಳಲ್ಲಿಯೂ ಪರಿಶೀಲಿಸಿ ತನಿಖೆಗೆ ಆದೇಶಿಸಿರು ವುದಾಗಿ ತಿಳಿಸಿದ್ದಾರೆ. ನಾನು ಎಲ್ಲಿಯೂ ಪ್ರಭಾವ ಬೀರಿಲ್ಲ, ಅಲ್ಲದೆ ಮುಡಾ ನಿವೇಶನಗಳು ನನ್ನ ಅಧಿಕಾರದ ಅವಧಿಯಲ್ಲಿ ಮಂಜೂರು ಮಾಡಿಸಿದ್ದಲ್ಲ, ಅವು ಬಿಜೆಪಿ ಅಧಿಕಾರಾವಧಿಯಲ್ಲಿ ಮಂಜೂರಾಗಿರುವುದು, ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಹೀಗಿದ್ದ ಮೇಲೆ ನಿಯಮ ಬಾಹಿರವಾಗಿ ಕೆಸರೆ ಬದಲಿಗೆ ವಿಜಯನಗರದಲ್ಲಿ ನಿವೇಶನ ಮಂಜೂರಾಗಿದ್ದು ಹೇಗೆ? ಇದರಲ್ಲಿ ಅವರ ಪ್ರಭಾವವಿದೆ ಎಂಬುದು ಸ್ಪಷ್ಟವಲ್ಲವೇ? ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಪ್ಪು ಮಾಡಿಲ್ಲ ಎನ್ನುವುದಾದರೆ ತನಿಖೆ ಎದುರಿಸಲಿ.

ಇದರ ನಡುವೆ ಕೆಲ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಸಿದ್ದರಾಮಯ್ಯ ನವರ ವಿರುದ್ಧ ತನಿಖೆಗೆ ಆದೇಶಿಸಿದರೆ ಜನ ದಂಗೆ ಏಳುತ್ತಾರೆ, ರಕ್ತ ಕ್ರಾಂತಿ ಆಗುತ್ತದೆ, ಬಾಂಗ್ಲಾ ದೇಶದ ಪ್ರಧಾನಿ ದೇಶ ಬಿಟ್ಟ ಪರಿಸ್ಥಿತಿ ರಾಜ್ಯಪಾಲರಿಗೂ ಬರಬಹುದು ಎಂದು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯ. ಕಾಂಗ್ರೆಸ್ ಪಕ್ಷ ಸಂವಿಧಾನಬದ್ಧವಾಗಿ ಆಡಳಿತ ನಡೆಸುತ್ತಿದೆ ಎಂಬ ವಿಶ್ವಾಸ ಜನರಲ್ಲಿ ಗಟ್ಟಿಗೊಳ್ಳಬೇಕಾದರೆ ಸಿದ್ದರಾಮಯ್ಯನವರು ಕಾನೂನು ಹೋರಾಟ ಮಾಡಲಿ.

-ಮುಳ್ಳೂರು ಪ್ರಕಾಶ್, ದಟ್ಟಗಳ್ಳಿ, ಮೈಸೂರು.

Tags:
error: Content is protected !!