Mysore
31
clear sky

Social Media

ಶುಕ್ರವಾರ, 07 ಫೆಬ್ರವರಿ 2025
Light
Dark

ಓದುಗರ ಪತ್ರ: ಖೋ-ಖೋ ವಿಶ್ವಕಪ್; ಮೈಸೂರು ಹುಡುಗಿಯ ಸಾಧನೆ

ಭಾರತದಲ್ಲಿ ನಡೆದ ಚೊಚ್ಚಲ ಖೋ-ಖೋ ವಿಶ್ವಕಪ್ ಪಂದ್ಯಾವಳಿ ಯಲ್ಲಿ ಭಾರತೀಯ ಮಹಿಳಾ ಹಾಗೂ ಪುರುಷರ ತಂಡಗಳು ವಿಶ್ವ ಚಾಂಪಿಯನ್ ಆಗುವ ಮೂಲಕ ಭಾರತಕ್ಕೆ ಕೀರ್ತಿ ತಂದಿವೆ.

ಭಾರತೀಯ ಖೋ-ಖೋ ಮಹಿಳಾ ತಂಡಕ್ಕೆ ದಕ್ಷಿಣ ಭಾರತದಿಂದ ಆಯ್ಕೆಯಾಗಿದ್ದ ಏಕೈಕ ಆಟಗಾರ್ತಿ ಚೈತ್ರ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಚೈತ್ರ ಮೂಲತಃ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದವರು.

ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಫೈನಲ್ ತಲುಪಲು ಚೈತ್ರರವರ ಕೊಡುಗೆಯೂ ಅಪಾರ. ಅಲ್ಲದೆ ಫೈನಲ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ಕಪ್ ಮುಡಿಗೇರಿಸಿಕೊಳ್ಳಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಶ್ವಮಟ್ಟದಲ್ಲಿ ಕರ್ನಾಟಕದ ಹಾಗೂ ಮೈಸೂರಿನ ಕೀರ್ತಿಯನ್ನು ಹೆಚ್ಚಿಸಿರುವ ಮೈಸೂರಿನ ಕ್ರೀಡಾಪಟು ಚೈತ್ರರವರಿಗೆ ಅಭಿನಂದನೆಗಳು.

-ಪವನ್ ಜಯರಾಂ, ಸಿದ್ದಯ್ಯನಪುರ, ಚಾಮರಾಜನಗರ.

Tags: