Mysore
29
few clouds

Social Media

ಶನಿವಾರ, 25 ಏಪ್ರಿಲ 2026
Light
Dark

ಓದುಗರ ಪತ್ರ: ಮರುಪರಿಶೀಲನೆ ಅತ್ಯಗತ್ಯ

ಓದುಗರ ಪತ್ರ

ಇತ್ತೀಚಿನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ( ಎಫ್. ಸಿ. ಆರ್. ಎ) ತಿದ್ದುಪಡಿಗಳು ಕೇವಲ ನಿಯಮಗಳಲ್ಲ, ಅವು ದಶಕಗಳಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಬೆನ್ನೆಲುಬು ಮುರಿಯುವ ಸಂಚು. ಆಡಳಿತಾತ್ಮಕ ವೆಚ್ಚವನ್ನು ಶೇ. ೨೦ಕ್ಕೆ ಇಳಿಸಿರುವುದು ಮತ್ತು ದೆಹಲಿಯ ಖಾತೆ ತೆರೆಯಬೇಕೆಂಬ ಕಟ್ಟುನಿಟ್ಟು, ಗ್ರಾಮೀಣ ಭಾಗದ ಕುಷ್ಠರೋಗಿ ಕೇಂದ್ರಗಳು ಹಾಗೂ ಅನಾಥಾಶ್ರಮಗಳ ಆರ್ಥಿಕ ಮೂಲವನ್ನೇ ಕತ್ತರಿಸಿವೆ.

ವಿದೇಶಿ ದೇಣಿಗೆ ದುರುಪಯೋಗವಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಅಂಕಿ-ಅಂಶಗಳ ಪ್ರಕಾರ, ಲಕ್ಷಾಂತರ ಬಡವರು ಈ ಸಂಸ್ಥೆಗಳ ಮೂಲಕ ಉಚಿತ ಚಿಕಿತ್ಸೆ ಪಡೆಯುತ್ತಿzರೆ. ಈ ಬಿಗಿ ನಿಯಮಗಳು ಮಾನವೀಯ ನೆಲೆಯ ಸೇವಾ ಚಟುವಟಿಕೆಗಳನ್ನು ಹತ್ತಿಕ್ಕುತ್ತಿವೆ.

ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಕಿರುಕುಳವು ಅಂತಿಮವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕಾದ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದೆ. ಸರ್ಕಾರ ಈ ಕಠಿಣ ನಿಲುವುಗಳನ್ನು ಮರುಪರಿಶೀಲಿಸುವುದು ಅತ್ಯಗತ್ಯ.

-ಎಚ್.ಕೆ. ಡಾ.ವಿಜಯಕುಮಾರ,ಬೆಂಗಳೂರು

 

Tags:
error: Content is protected !!