ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಎನ್. ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಿ ಗ್ರಾಮವು ಕಾಡಂಚಿನ ಗ್ರಾಮವಾಗಿದೆ. ಗ್ರಾಮದ ಬೀದಿ ದೀಪಗಳು ಒಂದು ತಿಂಗಳಿನಿಂದ ಹಾಳಾಗಿದ್ದರೂ ಸಂಬಂಧಪಟ್ಟವರು ದುರಸ್ತಿ ಮಾಡದೇ ಇರುವುದರಿಂದ ಜನರು ಕಾಡು ಪ್ರಾಣಿಗಳು ಹಾಗೂ ಹಾವು ಚೇಳು ಮೊದಲಾದ ವಿಷಜಂತುಗಳ ಭಯದಿಂದಾಗಿ ರಾತ್ರಿ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜನಪ್ರತಿನಿಧಿಗಳು ಕೂಡಲೇ ಗ್ರಾಮದಲ್ಲಿ ವಿದ್ಯುತ್ ದೀಪಗಳನ್ನು ದುರಸ್ತಿಪಡಿಸುವ ಮೂಲಕ ಗಾಮಸ್ಥರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
– ಅನಿಲ್, ಮಳಲಿ, ಎಚ್.ಡಿ.ಕೋಟೆ ತಾ




