ಮೈಸೂರು ನಗರದ ಶ್ರೀ ಜಯಚಾಮರಾಜ ವೃತ್ತ ( ಹಾರ್ಡಿಂಜ್ ವೃತ್ತ) ಮತ್ತು ಕುಪ್ಪಣ್ಣ ಪಾರ್ಕ್ ನಡುವೆ ದೊಡ್ಡ ತೆರೆದ ಮೋರಿ ಇದ್ದು, ಗಬ್ಬು ವಾಸನೆ ಬರುತ್ತಿದೆ. ಇದು ಗ್ರಾಮಾಂತರ ಬಸ್ ನಿಲ್ದಾಣ, ಮೈಸೂರು ಅರಮನೆ ಮತ್ತು ದಸರಾ ವಸ್ತು ಪ್ರದರ್ಶನಗಳಿಗೆ ತೀರಾ ಹತ್ತಿರದಲ್ಲಿದ್ದು, ಪ್ರವಾಸಿಗರಿಗೆ ದುರ್ವಾಸನೆಯಿಂದ ಮುಜುಗರವಾಗುತ್ತಿದೆ.
ಚರಂಡಿಯ ಬಳಿ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡೇ ಹೋಗುವುದು ಅನಿವಾರ್ಯವಾಗಿದೆ. ಸಂಬಂಧಪಟ್ಟ ಇಲಾಖೆಯವರು ಈ ಚರಂಡಿಯನ್ನು ದುರಸ್ತಿ ಮಾಡಿ ಸ್ಲ್ಯಾಬ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
– ಡಾ. ಡಿ. ಎಸ್.ವಿಜಯಕುಮಾರ್, ರೂಪಾನಗರ, ಮೈಸೂ





