ಜನರಿಂದ ಆಯ್ಕೆಯಾದ ಶಾಸಕರು ತಮ್ಮ ಕ್ಷೇತ್ರದ ಜನರಿಗೆ ಯಾವ ದಿನ, ಯಾವ ಸಮಯದಲ್ಲಿ ಲಭ್ಯವಿರುತ್ತಾರೆ ಎಂಬ ಮಾಹಿತಿ ತಿಳಿದಿರಬೇಕು.
ತಮ್ಮ ಸಮಸ್ಯೆ ಹಾಗೂ ಅಹವಾಲುಗಳನ್ನು ಹೇಳಿಕೊಳ್ಳಲು ದೂರದ ಊರುಗಳಿಂದ ಬರುವ ಜನರು ಶಾಸಕರ ಭೇಟಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಬದಲಾಗಬೇಕು. ಶಾಸಕರ ಕ್ಷೇತ್ರ ಪ್ರವಾಸ, ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕರ ಭೇಟಿಯ ವೇಳಾಪಟ್ಟಿಯನ್ನು ಮುಂಚಿತವಾಗಿ ಪ್ರಕಟಿಸುವುದು ಅಗತ್ಯವಾಗಿದೆ.
ಈ ನಿಟ್ಟಿನಲ್ಲಿ ದ್ರಾವಿಡ ಕನ್ನಡಿಗರು ಚಳವಳಿಯ ವತಿಯಿಂದ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಈ ಜನಪರ ಅಭಿಯಾನಕ್ಕೆ ಪ್ರಜ್ಞಾವಂತ ನಾಗರಿಕರು, ಯುವಕರು, ಸಂಘಟನೆಗಳು ಹಾಗೂ ಸಾರ್ವಜನಿಕರು ಧ್ವನಿಗೂಡಿಸಿ ಬೆಂಬಲಿಸಬೇಕು. ಇದು ಯಾರ ವಿರುದ್ಧದ ಹೋರಾಟವಲ್ಲ, ಜನರ ಹಕ್ಕು ಮತ್ತು ಗೌರವಕ್ಕಾಗಿ ನಡೆಯುವ ಪ್ರಯತ್ನ. ಶಾಸಕರು ಜನರಿಗೆ ಸಿಗಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುದೇ ನಮ್ಮ ಆಶಯ.
-ಮಹದೇವ ಎಂ. ಕರಿಯನಪುರ, ಕೊಳ್ಳೇಗಾಲ ತಾ.


