Mysore
28
broken clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಓದುಗರ ಪತ್ರ: ತಂತ್ರಜ್ಞಾನಾಧಾರಿತ ನ್ಯೂಟ್ರಿ ಸ್ಕೋರ್ ಜಾರಿಗೆ ತನ್ನಿ

ಓದುಗರ ಪತ್ರ

ದೇಶದಲ್ಲಿ ೪೦ ಕೋಟಿಗೂ ಹೆಚ್ಚು ಮಂದಿ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರೂ ಜಂಕ್ ಫುಡ್ ಕಂಪೆನಿಗಳು ಪೌಷ್ಟಿಕಾಂಶದ ವಿವರಗಳನ್ನು ಸಣ್ಣ ಅಕ್ಷರಗಳಲ್ಲಿ ಬರೆದು ಜನರನ್ನು ವಂಚಿಸುತ್ತಿವೆ. ಫ್ರಾನ್ಸ್‌ನ ನ್ಯೂಟ್ರಿ ಸ್ಕೋರ್ (ಎ ಇಂದ ಈ) ಮಾದರಿಯನ್ನು ಭಾರತದಲ್ಲೂ ತಕ್ಷಣವೇ ಕಡ್ಡಾಯಗೊಳಿಸಬೇಕು.

ಪ್ರಸ್ತುತ ಎಫ್.ಎಸ್.ಎಸ್. ಎ.ಐ. ತರಲು ಹೊರಟಿರುವ ಸ್ಟಾರ್ ರೇಟಿಂಗ್ ವ್ಯವಸ್ಥೆಯು ಕಾರ್ಪೊರೇಟ್ ಕಂಪೆನಿಗಳ ಲಾಭಕ್ಕಾಗಿ ಹೆಣೆದಿರುವ ಕಣ್ಣೊರೆಸುವ ತಂತ್ರವಾಗಿದೆ. ಪ್ಯಾಕೆಟ್‌ಗಳ ಮೇಲೆ ನೂತನ ತಂತ್ರeನ ಆಧಾರಿತ ಬಾರ್‌ಕೋಡ್ ಮತ್ತು ಸ್ಮಾರ್ಟ್ ಕ್ಯೂಆರ್ ತಂತ್ರeನವನ್ನು ಅಳವಡಿಸಬೇಕು. ಗ್ರಾಹಕರು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದ ತಕ್ಷಣ ಆಹಾರದಲ್ಲಿರುವ ಅಪಾಯಕಾರಿ ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಮಟ್ಟವು ‘ಎ ನಿಂದ ಈ’ ಶ್ರೇಣಿಯಲ್ಲಿ ಸ್ಪಷ್ಟವಾಗಿ ಕಾಣಿಸಬೇಕು. ಸಾರ್ವಜನಿಕರ ಆರೋಗ್ಯವನ್ನು ಕಂಪೆನಿಗಳ ಲಾಭಕ್ಕಾಗಿ ಬಲಿ ಕೊಡುವುದನ್ನು ಕೇಂದ್ರ ಸರ್ಕಾರ ತಕ್ಷಣವೇ ನಿಲ್ಲಿಸಬೇಕು.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!