Mysore
21
overcast clouds

Social Media

ಶುಕ್ರವಾರ, 30 ಅಕ್ಟೋಬರ್ 2026
Light
Dark

ಓದುಗರ ಪತ್ರ: ಸಂತೋಷ ಸಂಕಟ ತರಬಾರದು

ಓದುಗರ ಪತ್ರ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಅನೇಕ ರಸ್ತೆಗಳಿಗೆ ಹಾಕಲಾಗಿರುವ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳಲು ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಆದರೆ ಪ್ರಮುಖ ರಸ್ತೆಗಳೂ ಸೇರಿದಂತೆ ಅನೇಕ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ಸಂಚಾರದಿಂದ ಸಮಸ್ಯೆಗಳು ಉಂಟಾಗುತ್ತಿವೆ.

ಟ್ರಾಫಿಕ್ ಜಾಮ್‌ನ ಪರಿಣಾಮ ಎರಡು ದಿನಗಳ ಹಿಂದೆ ಆಂಬ್ಯುಲೆನ್ಸ್ ಸೇವೆಗೆ ತೊಂದರೆಯಾಯಿತಂತೆ. ಹೀಗೆ ನೋವಿನ ಅನುಭವ ಬೇರೆಯವರಿಗೂ ಬೇರೆ ರೀತಿಯಲ್ಲಿ ಆಗಿರಬಹುದು. ನಮ್ಮ ಸಂತೋಷ ತೊಂದರೆಯಲ್ಲಿರುವವರಿಗೆ ನೋವು ತರಬಾರದು.

ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು. ಲೈಟಿಂಗ್ಸ್ ವೈಭವಕ್ಕೆ ನಿಗದಿಪಡಿಸಿರುವ ರಸ್ತೆಗಳಲ್ಲಿ ನೋಡುಗರಿಗೆ ಸಮಯ ನಿಗದಿ ಮಾಡಿ ವಾಪಸು ಬರುವಂತೆ ಮಾಡಬೇಕು. ಲೈಟಿಂಗ್ಸ್ ಪ್ರಿಯರು ತಮ್ಮ ಮೊಬೈಲ್‌ಗಳಲ್ಲಿ , ಕ್ಯಾಮೆರಾಗಳಲ್ಲಿ ಗಂಟೆಗಟ್ಟಲೆ ಫೋಟೋ ಶೂಟ್ ಮಾಡುತ್ತಾ ಕಾಲ ಕಳೆಯುತ್ತಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದಕ್ಕೆ ಸ್ವಲ್ಪಮಟ್ಟಿಗಾದರೂ ನಿಯಂತ್ರಣ ಹಾಕಬೇಕಾಗಿದೆ.

– ನಾಗೇಶ್ , ಮಾನಸಗಂಗೋತ್ರಿ, ಮೈಸೂರು

Tags:
error: Content is protected !!