ನಂಜನಗೂಡು ತಾಲ್ಲೂಕು ಬಾಗೂರು ಅಣೆಕಟ್ಟೆ ದೊಡ್ಡ ಅಣೆಕಟ್ಟೆಯಾಗಿದೆ. ಹಿಂದೆ ಅನೇಕ ಹಳ್ಳಿಗಳಿಗೆ ಕೋಡಿ ತುಂಬಿ ಯಥೇಚ್ಛವಾಗಿ ಇದರಿಂದ ನೀರು ಹರಿದು ಬರುತ್ತಿತ್ತು. ಉದಾಹರಣೆಗೆ ಬಾಗೂರು, ಕೂಡ್ಲಾಪುರ, ತರದಲೆ, ಮಲ್ಲಹಳ್ಳಿ, ಹೆಮ್ಮರಗಾಲ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ದೊರೆಯುತ್ತಿತ್ತು. ಈಗ ಅಣೆಕಟ್ಟೆ ನೀರು ನಿಲ್ಲದೆ ಮಳೆ ಬಂದರೆ ಬೇರೆ ಕಡೆ ಹರಿದು ಹೋಗುತ್ತಿದೆ. ದಾರಿ ಉದ್ದಕ್ಕೂ ನೀರು ಹರಿಯುತ್ತಿದ್ದ ಗುಂಡಿಗಳು ಮುಚ್ಚಿಹೋಗಿವೆ. ಹೂಳು ತೆಗೆಸಬೇಕಾಗಿದೆ. ನೀರು ದೊರೆಯುತ್ತಿದ್ದ ಸಂದರ್ಭದಲ್ಲಿ ರೈತರು ಪ್ರತಿ ವರ್ಷ ಎರಡು ಬೆಳೆಗಳನ್ನು ತೆಗೆಯುತ್ತಿದ್ದರು. ಆದರೆ ಈಗ ಒಂದು ಬೆಳೆಯನ್ನೂ ತೆಗೆಯಲಾರದೆ ಕೂಲಿನಾಲಿಗಾಗಿ ಬೇರೆಕಡೆ ಹೋಗುವ ಪರಿಸ್ಥಿತಿ ಉಂಟಾಗಿದೆ. ದನಕರುಗಳಿಗೂ ಕುಡಿಯಲು ನೀರಿಲ್ಲ, ಮೇವಿಗೂ ಸಮಸ್ಯೆ ಉಂಟಾಗಿದೆ.
ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಽಕಾರಿಗಳು ಬಾಗೂರು ಅಣೆಕಟ್ಟೆಗೆ ನೀರು ತುಂಬಿಸಿ ಹರಿಯುವಂತೆ ಮಾಡಿ, ಹಳ್ಳಿಗಳಿಗೆ ಮತ್ತು ಸುತ್ತಮುತ್ತಲ ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತಾದರೆ ರೈತರಿಗಲ್ಲದೆ ಜನಸಾಮಾನ್ಯರಿಗೂ ಅನುಕೂಲವಾಗುತ್ತದೆ.
-ಕೆ.ಪಿ. ಬಸವಯ್ಯ, ಮೈಸೂರು



