ಕೆಲವು ಜನರು ತಮ್ಮ ಮನೆಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಸುರಿಯುವ ಮೂಲಕ ವಿರೂಪಗೊಳಿಸಿ ಸ್ವಚ್ಛ ಭಾರತದ ನಿಯಮವನ್ನು ಉಲ್ಲಂಸು ತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ರಸ್ತೆ ಬದಿಯಲ್ಲಿ ಸಾಲು ಮರಗಳ ಸುಂದರ ನೋಟ ಕಾಣಬಹುದಾಗಿತ್ತು.ಆ ಜಾಗದಲ್ಲೀಗ ಕಸದ ರಾಶಿಯ ದರ್ಶನವಾಗುತ್ತಿದ್ದು, ಮುಜುಗರ ಉಂಟು ಮಾಡುತ್ತಿದೆ.
ಇಂದು ಸಮಾಜದ ಶೇ.೯೦ರಷ್ಟು ಜನರು ವಿದ್ಯಾವಂತರಾಗಿದ್ದಾರೆ. ದೇಶ-ವಿದೇಶಗಳಿಗೆ ಹೋಗಿ ಅಲ್ಲಿನ ಸ್ವಚ್ಛ ಸುಂದರ ಪರಿಸರದ ಬಗ್ಗೆ ಹಾಡಿ ಹೊಗಳುವ ಜನರು ನಮ್ಮ ದೇಶದಲ್ಲೇಕೆ ಸ್ವಚ್ಛ ಸುಂದರ ಪರಿಸರ ನಿರ್ಮಿಸಲು ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸಾರ್ವಜನಿಕರು ಇನ್ನು ಮುಂದಾದರೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ನಾಗರಿಕ ಪ್ರಜ್ಞೆ ಮೆರೆಯುವುದು ಅಗತ್ಯ.
-ಎಂ.ಜೆ.ರುದ್ರಮೂರ್ತಿ, ಚಿತ್ರದುರ್ಗ





