ತನಗೆ ಬರುವ ಅಲ್ಪ ಸಂಬಳದಲ್ಲಿಯೇ ಸ್ವಲ್ಪ ಹಣವನ್ನು ಉಳಿಸಿ, ಕೂಡಿಟ್ಟು ಖರೀದಿಸಿದ್ದ ನಿವೇಶನವನ್ನು ಅಂಗನವಾಡಿಗೆ ದಾನ ಮಾಡಿರುವ ತುಮಕೂರು ಜಿಲ್ಲೆ ಪಾವಗಡದ ಶಾಂತಮ್ಮನವರ ಕಾರ್ಯ ಶ್ಲಾಘನೀಯ.
ಕೋಟಿ ಕೋಟಿ ಹಣವಿದ್ದರೂ ಒಂದೇ ಒಂದು ರೂಪಾಯಿ ಖರ್ಚು ಮಾಡಲೂ ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ತಮ್ಮ ಊರಿನ ಮಕ್ಕಳ ಶಿಕ್ಷಣಕ್ಕಾಗಿ ತಾನು ಕೂಡಿಟ್ಟು ಖರೀದಿಸಿದ್ದ ನಿವೇಶನವನ್ನು ಶಾಂತಮ್ಮ ದಾನ ನೀಡಿರುವುದು ಅವರ ಔದಾರ್ಯಕ್ಕೆ ಸಾಕ್ಷಿಯಾಗಿದೆ. ಸಮಾಜಕ್ಕಾಗಿ ಕೊಟ್ಟಿದ್ದು ಸಾವಿರಪಟ್ಟು ಮರಳುತ್ತದೆ ಎಂಬ ಮಾತಿದೆ. ತಮ್ಮ ಊರಿನ ಪುಟಾಣಿಗಳ ಭವಿಷ್ಯಕ್ಕಾಗಿ ನಿವೇಶನ ನೀಡಿದ ಶಾಂತಮ್ಮನವರ ನಡೆ ಮಾದರಿಯಾಗಿದ್ದು, ಇಂತಹನಿಸ್ವಾರ್ಥ ಮನೋಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾಗಿದೆ.
– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





