Mysore
20
broken clouds

Social Media

ಬುಧವಾರ, 02 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಪಾದಚಾರಿ ಮಾರ್ಗಕ್ಕೂ ಅಡ್ಡಗಾಲು

ಮೈಸೂರಿನ ಕುವೆಂಪು ನಗರ ಕಾಂಪ್ಲೆಕ್ಸ್ ಹತ್ತಿರ ಇರುವ ಒಂದನೇ ಹಂತ (ಇಡಬ್ಲ್ಯು ಎಸ್) ೩ನೇ ಕ್ರಾಸ್ ಬಳಿ ರಸ್ತೆಯ ಒಂದು ಬದಿಯಲ್ಲಿ ಸುಂದರ ಹಾಗೂ ಸುಸಜ್ಜಿತವಾದ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ. ಈ ರಸ್ತೆಯ ಬದಿ ಇರುವ ಹಲವು ಸಜ್ಜನರು ತಮ್ಮ ತಮ್ಮ ಮನೆಯ ಎದುರು ಇರುವ ಪಾದಚಾರಿ ಮಾರ್ಗವನ್ನು ಸುಂದರವಾಗಿಟ್ಟುಕೊಂಡಿದ್ದಾರೆ.

ಆದರೆ ಈ ರಸ್ತೆಯ ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಯ ಎದುರು ಇರುವ ಪಾದಚಾರಿ ಮಾರ್ಗದ ಮೇಲೆ ಸಾಲಾಗಿ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿ ಪಾದಚಾರಿಗಳಿಗೆ ಕಿರಿಕಿರಿ ಉಂಟುಮಾಡುತ್ತಿzರೆ. ಹಾಗೆಯೇ ಈ ೩ ನೇ ಕ್ರಾಸ್ ತಿರುವಿನಲ್ಲಿ ಪಾದಚಾರಿಗಳು ಓಡಾಡದಂತೆ ಪಾಲಿಕೆಯು ಫಲಕ ಅಳವಡಿಸಿದೆ ಹಾಗೂ ತೆಂಗಿನ ಮರದ ತ್ಯಾಜ್ಯಗಳನ್ನು ಇಡಲಾಗಿದೆ.

ಇದರೊಂದಿಗೆ ಜಹೀರಾತು ಫಲಕವೂ ಪಾದಚಾರಿಗಳಿಗೆ ಅಡ್ಡಗಾಲಾಗಿದೆ. ಈ ಕೂಡಲೇ ಪಾಲಿಕೆಯು ಎಚ್ಚೆತ್ತು ಕುವೆಂಪು ನಗರದ ಈ ಪಾದಚಾರಿ ಮಾರ್ಗದ ಮೇಲೆ ಇರುವ ದ್ವಿಚಕ್ರವಾಹನ, ಪಾಲಿಕೆಯ ಫಲಕ ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸಿ ಪಾದಚಾರಿಗಳ ಹಕ್ಕುಗಳನ್ನು ರಕ್ಷಿಸಬೇಕಾಗಿದೆ.

-ಪಿ.ಜೆ.ರಾಘವೇಂದ್ರ, ಮೈಸೂರು

 

Tags:
error: Content is protected !!